'ಮೋದಿ ಭೇಟಿ ನೀಡದ ದೇಶ ಯಾವುದು?' ಕೇರಳದ ಪರೀಕ್ಷೆಯಲ್ಲಿ ವಿವಾದಾತ್ಮಕ ಪ್ರಶ್ನೆ

ರಧಾನಿ ಅವರ ವಿದೇಶಿ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗಳಾಗುತ್ತವೆ. ಆದರೆ ಹೈಕೋರ್ಟ್ ಸಹಾಯಕರ ಹುದ್ದೆಗೆ ನಡೆಸಲಾದ ಪರೀಕ್ಷೆಯಲ್ಲಿ
ಕೆನಡಾ ಪ್ರವಾಸದ ವೇಳೆಯಲ್ಲಿ ನರೇಂದ್ರ ಮೋದಿ
ಕೆನಡಾ ಪ್ರವಾಸದ ವೇಳೆಯಲ್ಲಿ ನರೇಂದ್ರ ಮೋದಿ
Updated on

ಕೊಚಿ: ಪ್ರಧಾನಿ ಅವರ ವಿದೇಶಿ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗಳಾಗುತ್ತವೆ. ಆದರೆ ಹೈಕೋರ್ಟ್ ಸಹಾಯಕರ ಹುದ್ದೆಗೆ ನಡೆಸಲಾದ ಪರೀಕ್ಷೆಯಲ್ಲಿ ಇದಕ್ಕೆ ಕುರಿತಾದ ಪ್ರಶ್ನೆಯೊಂದನ್ನು ಕೇಳಿದ್ದು ಈಗ ವಿವಾದಕ್ಕೀಡಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇರಳ ಹೈಕೋರ್ಟ್ ನಿರ್ಧರಿಸಿದೆ. ಪ್ರಶ್ನೆ ಹೀಗಿತ್ತು- ಇವುಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಡದ ರಾಷ್ಟ್ರಗಳು ಯಾವುವು? - ಪ್ರಶ್ನೆಗಿದ್ದ ಆಯ್ಕೆಗಳು . ಯು ಎಸ್ ಎ, ಆಸ್ಟ್ರೇಲಿಯಾ, ಯು ಕೆ ಮತ್ತು ದಕ್ಷಿಣ ಕೊರಿಯಾ.

ಪ್ರಧಾನಿ ಅವರ ವಿದೇಶಿ ಪ್ರವಾಸಗಳು ಮಾಧ್ಯಮಗಳ ಟೀಕೆಯನ್ನು ಎದುರಿಸಿದ್ದು ಇದೆ ಆದರೆ ಈ ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳ ನಡುವೆ ಇದು ಬಿಸಿ ಚರ್ಚೆಯಾಗಿತ್ತು. "ನಾನು ಈ ಪ್ರಶ್ನೆಯನ್ನು ನೋಡಿ ಆಶ್ಚರ್ಯಚಕಿತನಾದೆ. ಈ ಪರೀಕ್ಷಾ ಪ್ರಶ್ನೆಗಳನ್ನು ಸಿದ್ಧಪಡಿಸಿದವರು ಬೇಕಂತಲೇ ಪ್ರಧಾನಿಯವರನ್ನು ಟೀಕೆ ಮಾಡಲು ಹೀಗೆ ಮಾಡಿದ್ದಾರೆ" ಎಂದು ಹೆಸರು ಹೇಳಲಿಚ್ಚಿಸದ ಅಬ್ಯಾರ್ಥಿಯೊಬ್ಬರು ತಿಳಿಸಿದಿದ್ದಾರೆ. ಈ ಪರೀಕ್ಷೆ ನಡೆಸುವ ಕಾರ್ಯ ರಾಜ್ಯ ಸರ್ಕಾರದ ಕೆಳಗಿನ ಸ್ವಾಯತ್ತತ ಸಂಸ್ಥೆಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ ಬಿ ಎಸ್ ಕೇಂದ್ರದ್ದಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com