ಮಾಯದಂಥಾ ಮುಂಗಾರು,ರಾಜ್ಯದಲ್ಲಿ ಕಾರುಬಾರು

ರಾಜ್ಯಾದ್ಯಂತ ಮಳೆಯಬ್ಬರ ಗುರುವಾರವೂ ಮುಂದುವರಿದಿದೆ...
ರಾಜ್ಯಾದ್ಯಂತ ಮುಂದುವರಿದಿರುವ ಮಳೆ ಆರ್ಭಟ
ರಾಜ್ಯಾದ್ಯಂತ ಮುಂದುವರಿದಿರುವ ಮಳೆ ಆರ್ಭಟ
Updated on: 

ಬೆಂಗಳೂರು: ರಾಜ್ಯಾದ್ಯಂತ ಮಳೆಯಬ್ಬರ ಗುರುವಾರವೂ ಮುಂದುವರಿದಿದೆ.

ಮೈಸೂರಿನ ಸಾಹುಕಾರ ಹುಂಡಿಯಲ್ಲಿ ಸಿಡಿಲಿಗೆ ಯುವಕನೊಬ್ಬ ಬಲಿಯಾಗಿದ್ದು, ಆತನ ತಾತ ತೀವ್ರವಾಗಿ ಗಾಯಗೊಂಡಿದ್ದಾರೆ. ಕೊಡಗಿನ ಸೋಮವಾರಪೇಟೆಯಲ್ಲಿ ಸಿಡಿಲಿನ ಶಬ್ದಕ್ಕೆ ಹೃದಯಾಘಾತಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರೆ, ಮಂಗಳೂರಿನ ಕಂಕನಾಡಿಯಲ್ಲಿ ಯುವಕನೊಬ್ಬ ಸಿಡಿಲಿಗೆ ಬಲಿಯಾಗಿದ್ದಾನೆ. ಸುಳ್ಯ ತಾಲ್ಲೂಕಿನ ದುಗಲಡ್ಕ ಶಾಲೆಗೆ ಸಿಡಿಲು ಬಡಿದಿದ್ದು, ವಿದ್ಯಾರ್ಥಿಗಳು ಅದೃಷ್ಟವಶಾತ್ ಪಾರಾಗಿದ್ದಾರೆ.

ನವದೆಹಲಿ: ಬರಗಾಲದ ಭೀತಿಯಿಂದ ನಿದ್ದೆಗೆಟ್ಟಿರುವ ಜನರಿಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸಾಂತ್ವನದ ಮಾತುಗಳನ್ನಾಡಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮಳೆ ಸ್ವಲ್ಹ ಕಡಿಮೆ ಬಿದ್ದರೂ, ಅದು ದೇಶದ ಆಹಾರ ಉತ್ಪಾದನೆ ಮೇಲೆ ಏನೂ ಪರಿಣಾಮ ಬೀರದು ಎನ್ನುವ ಮೂಲಕ ದೇಶದ ಜನರಲ್ಲಿ ಆಶಾಭಾವನೆ ಮೂಡಿಸಿದ್ದಾರೆ.

ಈ ವರ್ಷ ದೇಶಕ್ಕೆ ಬರಗಾಲ ಭೀತಿಯಿದೆ ಎಂಬ ಸುದ್ದಿ ಬರಸಿಡಿಲಿನಂತೆ ಬಂದೆರಗಿರುವುದು ಎಲ್ಲರ ಭೀತಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ದೆಹಲಿಯಲ್ಲಿ ಮಾತನಾಡಿದ ಸಚಿವ ಜೇಟ್ಲಿ, ನಾನು ಹವಾಮಾನ ಇಲಾಖೆಯಿಂದ ಪರಿಸ್ಥಿತಿ ಬಗ್ಗೆ ವಿಸ್ತ್ರತ ವರದಿ ಪಡೆದು ಪರಿಶೀಲನೆ ನಡೆಸಿದ್ದೇನೆ. ಅದರ ಆಧಾರದಲ್ಲಿ ಹೇಳುವುದಾದರೆ, ಮಳೆಯ ಪ್ರಾದೇಶಿಕ ಹಂಚಿಕೆ ಮತ್ತು ಅದರ ಸಮಯವೇ ಮುಖ್ಯವಾಗುತ್ತದೆ.

ಪ್ರಸಕ್ತ ವರ್ಷ ದಕ್ಷಿಣ, ಮಧ್ಯ ಹಾಗೂ ಈಶಾನ್ಯ ಭಾರತದಲ್ಲಿ ವಾಡಿಕೆಯಷ್ಟೇ ಮಳೆಯಾಗಲಿದೆ. ದೇಶದ ವಾಯವ್ಯ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಕೊರತೆ ಉಂಟಾಗಬಹುದು. ಆದರೆ, ಅವು ಉತ್ತಮ ನೀರಾವರಿಯ ಪ್ರದೇಶಗಳಾಗಿರುವ ಕಾರಣ ಆಹಾರ ಉತ್ಪಾದನೆಗೆ ಸಮಸ್ಯೆಯಾಗದು. ಹಾಗಾಗಿ ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.

ದೇಶದಲ್ಲಿ ಒಂದು ವರ್ಷಕ್ಕೆ ಸಾಕಾಗುವಷ್ಟು ಆಹಾರ ದಾಸ್ತಾನಿದೆ. ಮಳೆ ಕೊರತೆ ಎದುರಾದರೂ ಅದು ನಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರದು.
ರಾಮ್‍ವಿಲಾಸ್ ಪಾಸ್ವಾನ್, ಕೇಂದ್ರ ಆಹಾರ ಸಚಿವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com