ಕಾಮೆಡ್ ಕೆ ಫಲಿತಾಂಶ ಪ್ರಕಟ: ಕರ್ನಾಟಕದ ವಿದ್ಯಾರ್ಥಿಗಳ ಮೇಲುಗೈ

ವಿದ್ಯಾರ್ಥಿಗಳ ಬಹು ನಿರೀಕ್ಷಿತ ಕಾಮೆಡ್ ಕೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಕರ್ನಾಟಕದ ಹೆಚ್ಚಿನ ವಿದ್ಯಾರ್ಥಿಗಳು ಅಗ್ರ ಹತ್ತರ ಪಟ್ಟಿಯಲ್ಲಿ ಹೆಚ್ಚು ಸ್ಥಾನ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಕಾಮೆಡ್ ಕೆ
ಕಾಮೆಡ್ ಕೆ

ಬೆಂಗಳೂರು: ವಿದ್ಯಾರ್ಥಿಗಳ ಬಹು ನಿರೀಕ್ಷಿತ ಕಾಮೆಡ್ ಕೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಕರ್ನಾಟಕದ ಹೆಚ್ಚಿನ ವಿದ್ಯಾರ್ಥಿಗಳು ಅಗ್ರ ಹತ್ತರ ಪಟ್ಟಿಯಲ್ಲಿ ಹೆಚ್ಚು ಸ್ಥಾನ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

ಕಾಮೆಡ್ ಕೆ ಫಲಿತಾಂಶ ಮೇ 30ರಂದೇ ಪ್ರಕಟಗೊಳ್ಳಬೇಕಿತ್ತಾದರೂ, ರ್ಯಾಂಕ್ ಪಟ್ಟಿ ತಯಾರಿಕೆ ವೇಳೆ ಆದ ಗೊಂದಲದಿಂದಾಗಿ ಫಲಿತಾಂಶ ಪ್ರಕಟ ವಿಳಂಬವಾಯಿತು ಎಂದು ಕಾಮೆಡ್ ಕೆ ತಿಳಿಸಿದೆ. ಇನ್ನು ಈ ಹಿಂದೆ ಪ್ರಕಟವಾಗಿದ್ದ ಸಿಇಟಿ ಪರೀಕ್ಷಾ ಫಲಿತಾಂಶದಲ್ಲಿ ವೈದ್ಯಕೀಯ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದಿದ್ದ ಪ್ರಿಯಾ ನರ್ವಾಲ್ ಕಾಮೆಡ್​ಕೆ ಯಲ್ಲೂ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.


ಕಾಮೆಡ್ ಕೆಯಲ್ಲಿ ಅಗ್ರ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಸ್ವಾಗತ್, ಪ್ರಿಯಾ ನರ್ವಾಲ್ ಮತ್ತು ಅಲೈಕ್ಯಾ ರೆಡ್ಡಿ

ಇಂಜಿನಿಯರಿಂಗ್ ವಿಭಾಗದಲ್ಲಿ ಟಾಪ್ ಟೆನ್ ಪಟ್ಟಿಯಲ್ಲಿ ಎಂಟು ರ್ಯಾಂಕ್​ಗಳು ರಾಜ್ಯದ ವಿದ್ಯಾರ್ಥಿಗಳ ಪಾಲಾಗಿದ್ದು, ಜೂ.1ರಂದು ಪ್ರಕಟವಾಗಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಗಳಿಸಿದ್ದ ಕೊಮ್ಮುರು ಅಲೆಕ್ಯಾ ರೆಡ್ಡಿ ಕಾಮೆಡ್-ಕೆ ನಲ್ಲಿ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. ಉಳಿದಂತೆ ರಾಜ್ಯದ ಸ್ವಾಗತ್ ಎಸ್.ಯಾದವಾಡ್ ದ್ವಿತೀಯ, ಎಂ.ಪ್ರಶಾಂತ್, ಎಂ.ಕಾರ್ತಿಕ್(ಸಿಇಟಿ ತೃತೀಯ), ಎಂ.ಅನುದೀಪ್ ಕುಮಾರ್ ರೆಡ್ಡಿ (ಆಂದ್ರ ಪ್ರದೇಶ), ಹೈತುಲ್ ಅರೋರ (ದೆಹಲಿ) ಹಾಗೂ ಕರ್ನಾಟಕದ ಪೊಲಿಚರ್ಲ ಗುರು, ಅಕ್ಷಯ ಕೃಷ್ಣ ಎಸ್, ಅದ್ವಿತ್ ಶ್ರೀಧರ್, ಟಿ.ಕೆ.ಜೆಶ್ವೆಂತ್ ರಾಜಾ ಅಗ್ರ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com