

ಶ್ರೀನಗರ: ಜಮ್ಮುವಿನಲ್ಲಿ ಜುಲೈ ಎರಡರಿಂದ ಪ್ರಾರಂಭವಾಗುವ ೫೯ ದಿನಗಳ ವಾರ್ಷಿಕ ಅಮರನಾಥ ಯಾತ್ರೆಯ ಸುರಕ್ಷಿತ ಚಾಲನೆಗೆ ಭಾರತೀಯ ಸೇನೆ 'ಆಪರೇಶನ್ ಶಿವ' ಕಾರ್ಯಾಚರಣೆಯನ್ನು ಸಿದ್ಧಪಡಿಸಿದೆ.
"ಅಮರನಾಥ ಯಾತ್ರೆಗೆ ಭಯೋತ್ಪಾದಕ ಬೆದರಿಕೆಯ ಯಾವುದೇ ನಿರ್ಧಿಷ್ಟ ಮುನ್ಸೂಚನೆಯಿಲ್ಲ. ಆದರೆ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರ ಚಲನವಲನಗಳ ಬಗ್ಗೆ ಸಾಮಾನ್ಯ ಮಾಹಿತಿಯಿದೆ" ಎಂದು ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಸುಬ್ರಾತಾ ಸಾಹಾ ವರದಿಗಾರರಿಗೆ ತಿಳಿಸಿದ್ದಾರೆ.
"ಚಂದನ್ವಾರಿ ಮತ್ತು ಬಲ್ತಾಲ್ ಎರಡೂ ಮಾರ್ಗಗಳಲ್ಲಿ ಅಮರನಾಥ ಯಾತ್ರಿಕರಿಗೆ ಈ ಪರಿಸರದಲ್ಲಿ ಸೇನೆ ಭದ್ರತೆ ಒದಗಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.
ಈ ಮಾರ್ಗಗಳ ಪರಿವೀಕ್ಷಣೆಯನ್ನು ಪ್ರತಿದಿನವೂ ಮಾಡಲಾಗುತ್ತಿದೆ ಎಂದು ಸಾಹಾ ತಿಳಿಸಿದ್ದಾರೆ.
ಯಾತ್ರೆಯ ಮಾರ್ಗದಲ್ಲಿ ಹಾಗು ಗುಹಾ ದೇವಾಲಯದ ಸುತ್ತಮುತ್ತ ಮಾನವರಹಿತ ಆಕಾಶಮಾರ್ಗದ ವಾಹನಗಳನ್ನು ಕಣ್ಗಾವಲಿಗಾಗಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಗತ್ಯ ಬಿದ್ದಂತೆ ಭದ್ರತಾ ಕಾರ್ಯಾಚರಣೆಗಳನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಕೂಡ ಸಾಹಾ ತಿಳಿಸಿದ್ದಾರೆ.