ಯುವರಾಜನಿಗೆ ಕಾಂಗ್ರೆಸ್ ಅಧ್ಯಕ್ಷ ಕಿರೀಟ ತೊಡಿಸಲು ವೇದಿಕೆ ಸಜ್ಜು

ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಪೀಳಿಗೆ ಸ್ಥಿತ್ಯಂತರಕ್ಕೆ ಸಿದ್ಧವಾಗಿದೆ. ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತಾಯಿ
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 

ನವದೆಹಲಿ: ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಪೀಳಿಗೆ ಸ್ಥಿತ್ಯಂತರಕ್ಕೆ ಸಿದ್ಧವಾಗಿದೆ. ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ಅವರಿಂದ ಅಧ್ಯಕ್ಷ ಗಾದಿಯನ್ನು ತೆಗೆದುಕೊಳ್ಳಲು ವೇದಿಕೆ ಸಜ್ಜಾಗಿದೆ.

ಕಳೆಂದ ೮-೯ ತಿಂಗಳುಗಳಿಂದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ದಯನೀಯ ಸೋಲುಗಳನ್ನು ಕಂಡಿದ್ದರು, ಹಲವಾರು ನಾಯಕರು ರಾಹುಲ್ ಗಾಂಧಿ ಅವರ ಕೆಲಸದ ಶೈಲಿಯ ಬಗ್ಗೆ ಸಂದೇಶ ವ್ಯಕ್ತಪಡಿಸಿದ್ದರು ಕೂಡ ರಾಹುಲ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ಸೋನಿಯಾ ಅವರ ವಯಸ್ಸು ಮತ್ತು ಆರೋಗ್ಯದ ತೊಂದರೆಗಳಿಂದ ಈ ಬದಲಾಣೆಗೆ ಪಕ್ಷ ಹೊಂದಿಕೊಳ್ಳಲೇಬೇಕಾಗಿದೆ. ಅಲ್ಲದೆ ಕಾಂಗ್ರೆಸ್ ಅಧ್ಯಕ್ಷರಾಗಿ ಅವರ ಅವಧಿ ಕೂಡ ಮುಕ್ತಾಯವಾಗುತ್ತಿದೆ.

ಮೂಲಗಳ ಪ್ರಕಾರ ರಾಹುಲ್ ಗಾಂಧಿ ಆತ್ಮ ಚಿಂತನೆಗಾಗಿ ಕೆಲವು ದಿನಗಳ ರಜೆ ತೆಗೆದು ಕೊಂಡು ಯಾರಿಗೂ ತಿಳಿಯದ ಪ್ರದೇಶಕ್ಕೆ ಪ್ರವಾಸ ಹೋಗಿದ್ದಾರೆ. ಈ ಅವಧಿಯಲ್ಲಿ ಪಕ್ಷದ ನಾಯಕರನ್ನು ಹಾಗು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಬದಲಾವಣೆ ಬಗ್ಗೆ ಆಳವಾದ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರು ಅಧ್ಯಕ್ಷಗಾದಿಗೆ ಬಂದ ಮೇಲೆ ಹಳೆಯ ತಲೆಗಳು ಉರುಳಲಿವೆ ಹಾಗು ತಮ್ಮ ನಿಕಟವರ್ತಿಗಳು ಹಾಗು ಯುವಕರ ಪಡೆಯೊಂದನ್ನು ತಮ್ಮ ಹಿಂದೆ ಇಟ್ಟುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈ ರಜೆಯ ಅವಧಿ ಮುಗಿಯುವ ವೇಳೆಗೆ ಹೊಸ ಪಟ್ಟಿ ಬಿಡುಗಡೆಯಾಗಲಿದೆ ಎನ್ನುತ್ತವೆ ಮೂಲಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com