ನ್ಯಾಯಾಧೀಶ, ಉದ್ಯಮಿಯ ಮನೆಯಿಂದ ೩೦ ಲಕ್ಷ ಲೂಟಿ

ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮಾಜಿ ನ್ಯಾಯಾಧೀಶ ಮತ್ತು ಉದ್ಯಮಿಯ ಮನೆಗಳನ್ನು ದೋಚಿರುವ ದರೋದೆಕೋರರರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಮೀರತ್: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮಾಜಿ ನ್ಯಾಯಾಧೀಶ ಮತ್ತು ಉದ್ಯಮಿಯ ಮನೆಗಳನ್ನು ದೋಚಿರುವ ದರೋದೆಕೋರರರು ೩೦ ಲಕ್ಷಕ್ಕೂ ಹೆಚ್ಚು ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಂಡವ ನಗರದಲ್ಲಿ ಮಾಜಿ ನ್ಯಾಯಾಧೀಶ ಶ್ರೀಪಾಲ್ ಅವರ ಮನೆಗೆ ಕನ್ನ ಹಾಕಿದ ಕಳ್ಳರು ೪೫ ಸಾವಿರ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ,

ಮತ್ತೊಂದು ಘಟನೆಯಲ್ಲಿ ಉಮಾ ನಗರದಲ್ಲಿ ಉದ್ಯಮಿ ಹಾಜಿ ರಶೀದ್ ಅವರ ಮನೆಗೆ ಕನ್ನ ಹಾಕಿದ ಐವರು ಕಳ್ಳರು ಕುಟುಂಬ ಸದಸ್ಯರನು ರೂಮ್ ನಲ್ಲಿ ಕೂಡಿ ಹಾಕಿ ೧೦ ಲಕ್ಷ ನಗದು ಮತ್ತು ೨೦ ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಉದ್ಯಮಿಯ ಮಗಳ ಮದುವೆ ಹತ್ತಿರದಲ್ಲಿದ್ದಿದ್ದರಿಂದ ನಗದು ಮತ್ತು ಚಿನ್ನಾಭರಣಗಳನ್ನು ಮನೆಯಲ್ಲೇ ಇಡಲಾಗಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com