

ಆಲ್ಬನಿ: ಸಿಕ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಬಂದ ಕೆಲವೇ ಘಂಟೆಗಳ ನಂತೆ ಸ್ಯಾನ್ ಫ್ರಾನ್ಸಿಸ್ಕೋದ ಬೇ ಏರಿಯಾ ವಸತಿ ಸಮುಚ್ಚಯದಲ್ಲಿ ೩೭ ವರ್ಷದ ಭಾರತೀಯ ದಂತ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಆ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ ಎಂದು ತನಿಖಾದಿಕಾರಿಗಳು ತಿಳಿಸಿದ್ದಾರೆ.
ರಣಧೀರ್ ಕೌರ್ ಅವರ ದೇಹ ಮಾರ್ಚ್ ೮ ರಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ ಸಿಖ್ ದೇವಾಲಯದಲ್ಲಿ ಸಮಯ ಕಳೆದಿದ್ದ ಕೌರ್, ಸಂಜೆ ಓದುವುದರಲ್ಲಿ ಮಗ್ನಳಾಗುವುದರಲ್ಲಿದ್ದಳು ಆದರೆ ಅದಕ್ಕೂ ಮುಂಚೆ ಅವಳ ಮೇಲೆ ಗುಂಡಿನ ದಾಳಿ ಮಾಡಲಾಗಿದೆ ಎಂದು ಎಂದು ಸಾರ್ವಜನಿಕರು ತಿಳಿಸಿದ್ದಾರೆ ಎನ್ನಲಾಗಿದೆ.
ಮನೆಯೊಳಗೆ ಒತ್ತಡದಿಂದ ಬಾಗಿಲು ಮುರಿದು ಹೋಗಿರುವ ಯಾವುದೇ ಸುಳಿವುಗಳಿಲ್ಲ ಎಂದು ವರದಿ ಮಾಡಿರುವ ಸ್ಯಾನ್ ಫ್ರಾನ್ಸಿಸ್ಕೊ ಕ್ರಾನಿಕಲ್ ಪತ್ರಿಕೆ, ಮೃತ ಪಟ್ಟ ವಿದ್ಯಾರ್ಥಿನಿಯ ವಸ್ತುಗಳು ಅವರ ವಸತಿ ಸಮುಚ್ಚಯದಿಂದ ಸುಮಾರು ೩ ಕಿಮೀ ದೂರದಲ್ಲಿರುವ ಕಸದ ಡಬ್ಬದಲ್ಲಿ ಕಂಡು ಬಂದಿವೆ ಎಂದು ತಿಳಿಸಿದೆ.
ದಂತವೈದ್ಯ ಸಮುದಾಯಕ್ಕೆ ಇದು ತುಂಬಲಾರದ ನಷ್ಟ ಎಂದಿರುವ ಯು ಸಿ ಸ್ಯಾನ್ ಫ್ರಾನ್ಸಿಸ್ಕೊ ಅಧಿಕಾರಿಗಳು (ಯು ಸಿ ಎಸ್ ಎಫ್) ಶೋಕಾಚರಣೆಯ ಸಲುವಾಗಿ ಮೋಂಬತ್ತಿ ಹಚ್ಚಲಾಗುತ್ತದೆ ಎಂದು ವಿಶ್ವವಿದ್ಯಾಲಯದ ಅಂತರ್ಜಾಲ ತಾಣದಲ್ಲಿ ತಿಳಿಸಿದ್ದಾರೆ.