ವಿಜಯವಾಡ ಗೋಶಾಲದಲ್ಲಿ ವಿಷಾಹಾರ ಸೇವಿಸಿ ೨೧ ಹಸುಗಳ ಸಾವು

ಏಪ್ರಿಲ್ ೨೭ ರಿಂದ ವಿಷಾಹಾರ ಸೇವಿಸಿದ್ದರಿಂದ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಸುಮಾರು ೨೧ ಹಸುಗಳು ಅಸುನೀಗಿವೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಹೈದರಾಬಾದ್: ಏಪ್ರಿಲ್ ೨೭ ರಿಂದ ವಿಷಾಹಾರ ಸೇವಿಸಿದ್ದರಿಂದ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಸುಮಾರು ೨೧ ಹಸುಗಳು ಅಸುನೀಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರದವರೆಗೂ ೧೯ ಹಸುಗಳು ಮೃತಪಟ್ಟಿದ್ದು, ಸೋಮವಾರ ೨ ಹಸುಗಳು ಸಾವನ್ನಪ್ಪಿವೆ.

ಗೋಸಂರಕ್ಷಣಾ ಸಂಘ ನಡೆಸುವ ಗೋಶಾಲೆಯಲ್ಲಿ ಏಪ್ರಿಲ್ ೨೭ ರಿಂದ ೨೦೦ ಹಸುಗಳು ಸತ್ತಿವೆ. ಅವಧಿ ಮೀರಿದ ಹಸುವಿನ ಆಹಾರವನ್ನು ಗೋಶಾಲೆಗೆ ಒದಗಿಸಲಾಗಿದೆ ಎಂದು ದೂರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಸುವಿನ ಆಹಾರ ನೀಡಿದ ಉದ್ದಿಮೆದಾರನನ್ನು ಬಂಧಿಸಲಾಗಿದ್ದು, ಉಪೇಕ್ಷೆ ಮಾಡಿದ್ದಕ್ಕೆ ಗೋಶಾಲಾದ ೨೯ ಜನರ ಮೇಲು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ ೨೭ ರ ರಾತ್ರಿ ಪತ್ತೆ ಹಚ್ಚಲಾಗದ ಕೆಲವರು ಆಹಾರವನ್ನು ಹಸುಗಳಿಗೆ ನೀಡಿದ್ದು ಸಿಸಿಟಿವಿ ದೃಶ್ಯಾವಳಿಯ ಮೂಲಕ ನೋಡಿದ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ. ಹಲವಾರು ಹಸುಗಳು ಗುಣಮುಖವಾಗುತ್ತಿದ್ದು, ಬಹಳಷ್ಟು ಹಸುಗಳು ಗಂಭೀರ ಪರಿಸ್ಥಿಯಲ್ಲಿವೆ.

ತಮ್ಮ ಆಹಾರವಲ್ಲದ್ದನ್ನು ಸೇವಿಸಿ ಅನ್ನನಾಳದ ಅಜೀರ್ಣದಿಂದ ಹಸುಗಳು ಸತ್ತಿವೆ ಎನ್ನುತ್ತಾರೆ ಪಶುಸಂಗೋಪನಾ ಆರೋಗ್ಯ ಅಧಿಕಾರಿಗಳು.

ಈ ಘಟನೆ ಜನರಲ್ಲಿ ಆಕ್ರೋಶ ಕೆರಳಿಸಿದ್ದು, ತಪ್ಪಿತಸ್ಥರ ವಿರುದ್ಧ ಶೀಘ್ರ ತನಿಖೆ ಮತ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಕೃಷ್ಣ ಜಿಲ್ಲೆಯ ಕಲೆಕ್ಟರ್ ಅವರಿಗೆ ತನಿಖೆ ನಡೆಸುವಂತೆ ಆಂಧ್ರ ಸರ್ಕಾರ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com