ಕೋಲ್ಕತ್ತ ಲೋಕಲ್ ರೈಲಿನಲ್ಲಿ ಸ್ಪೋಟ; ೧೭ ಜನರಿಗೆ ಗಾಯ

ಕೋಲ್ಕತ್ತಾದ ಮುಂಜಾನೆಯ ಲೋಕಲ್ ರೈಲಿನಲ್ಲಿ ಸ್ಪೋಟ ಸಂಭವಿಸಿದೆ. ಸೀಲ್ಧಾಹ್ ಮತ್ತು ಕೃಷ್ಣನಗರ ನಡೆವೆ ಚಲಿಸುತ್ತಿದ್ದ ಪ್ರಾದೇಶಿಕ ರೈಲಿನಲ್ಲಿ ಸುಮಾರು ಬೆಳಗ್ಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ್ತ: ಕೋಲ್ಕತ್ತಾದ ಮುಂಜಾನೆಯ ಲೋಕಲ್ ರೈಲಿನಲ್ಲಿ ಸ್ಪೋಟ ಸಂಭವಿಸಿದೆ. ಸೀಲ್ಧಾಹ್ ಮತ್ತು ಕೃಷ್ಣನಗರ ನಡೆವೆ ಚಲಿಸುತ್ತಿದ್ದ ಪ್ರಾದೇಶಿಕ ರೈಲಿನಲ್ಲಿ ಸುಮಾರು ಬೆಳಗ್ಗೆ ೩:೫೫ ಕ್ಕೆ ಸ್ಪೋಟ ಸಂಭವಿಸಿದ್ದು ೧೭ ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾಗಿದೆ. ಪರಿಸ್ಥಿಯನ್ನು ಅವಲೋಕಿಸಿದ ಪೊಲೀಸರು ಇದು ಲಘು ತೀವ್ರತೆಯ ಸ್ಪೋಟ ಎಂದಿದ್ದಾರೆ.

ಗಾಯಗೊಂಡವರನ್ನು ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಚ್ ೫ ರಲ್ಲಿ ಇಬ್ಬರು ಜಗಳವಾಡುತ್ತಿದ್ದಾಗ ಈ ಸ್ಪೋಟ ಸಂಭವಿಸಿತು ಎಂದು ವರದಿಯಾಗಿದೆ. ಈ ಜಗಳದಲ್ಲಿ ಒಬ್ಬರ ಮೇಲೊಬ್ಬರು ಬಾಂಬ್ ಎಸೆದಿದ್ದಾರೆ ಎಂದು ಶಂಕಿಸಲಾಗಿದೆ.

ಇದು ದಿನದ ಮೊದಲ ರೈಲಾಗಿದ್ದರಿಂದ ಕೋಚ್ ಗಳು ಜನರಿಂದ ಕಿಕ್ಕಿರಿದಿದ್ದವು ಎಂದು ತಿಳಿದುಬಂದಿದೆ. ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com