ಪಾಕಿಸ್ತಾನದಲ್ಲಿ ೨ ಬಸ್ ಅಪಹರಣ; 19 ಪ್ರಯಾಣಿಕರ ಹತ್ಯೆ

ಬಂಧೂಕುದಾರಿಗಳು ಪಾಕಿಸ್ತಾನದಲ್ಲಿ ೨ ಬಸ್ಸುಗಳನ್ನು ಅಪಹರಿಸಿ ೧೯ ಪ್ರಯಾಣಿಕರನ್ನು ಕೊಂದಿರುವ ಹಿನ್ನಲೆಯಲ್ಲಿ ತಪ್ಪಿಸಿಕೊಂಡಿರುವ ಅಪಹರಣಕಾರರನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕ್ವೆಟ್ಟ: ಬಂಧೂಕುದಾರಿಗಳು ಪಾಕಿಸ್ತಾನದಲ್ಲಿ ೨ ಬಸ್ಸುಗಳನ್ನು ಅಪಹರಿಸಿ ೧೯ ಪ್ರಯಾಣಿಕರನ್ನು ಕೊಂದಿರುವ ಹಿನ್ನಲೆಯಲ್ಲಿ ತಪ್ಪಿಸಿಕೊಂಡಿರುವ ಅಪಹರಣಕಾರರನ್ನು ಹಿಡಿಯಲು ಪಾಕಿಸ್ತಾನಿ ಭದ್ರತಾ ಪಡೆ ಬೃಹತ್ ಶೋಧ ಕಾರ್ಯಾಚರಣೆಯನ್ನು ನಡೆಸಿದೆ.

ಬಂಧೂಕುದಾರಿಗಳು ಶುಕ್ರವಾರ ೨೫ ಪ್ರಯಾಣಿಕರನ್ನು ಅಪಹರಿಸಿ ಅವರಲ್ಲಿ ೧೯ ಜನರನ್ನು ಕೊಂದುಹಾಕಿದ್ದಾರೆ ಎಂದು ಬಲೂಚಿಸ್ಥಾನದ ಗೃಹಸಚಿವ ಸರ್ಫರಾಜ್ ಬಗ್ಟಿ ತಿಳಿಸಿದ್ದಾರೆ.

ಶನಿವಾರ ಆರು ಪ್ರಯಾಣಿಕರನ್ನು ಅಧಿಕಾರಿಗಳು ರಕ್ಷಿಸಿದ್ದು ಅವರಲ್ಲಿ ಒಬ್ಬರು ತೀವ್ರ ಗಾಯಗೊಂಡಿದ್ದರೆ ಎಂದು ಕೂಡ ಅವರು ತಿಳಿಸಿದ್ದಾರೆ,

ಬಲೂಚಿಸ್ಥಾನಕ್ಕೆ ಹೆಚ್ಚಿನ ಸ್ವಾಯತ್ತತೆಗಾಗಿ ಮತ್ತು ಆ ಪ್ರಾಂತ್ಯದ ಅನಿಲ ಮತ್ತು ಖನಿಜ ಸಂಪತ್ತಿನ ಹೆಚ್ಚಿನ ಹಂಚಿಕೆಗಾಗಿ ಅಲ್ಲಿನ ಪ್ರತ್ಯೇಕವಾದಿಗಳು, ರಾಷ್ಟ್ರೀಯವಾದಿಗಳು ಮತ್ತಿತರ ಗುಂಪುಗಳು ಆಗಾಗ ದಂಗೆಯೇಳುತ್ತಿರುತ್ತಾರೆ.

ಅಪಹರಿದ ಬಂದೂಕುಧಾರಿಗಳು ಸುಮಾರು ೫೦ ಜನರನ್ನು ಬಿಟ್ಟಿದ್ದಾರೆ. ೨೫ ಜನರನ್ನು ಕೊಂಡೊಯ್ಯುವಾಗ, ಭದ್ರತಾ ಪಡೆಗಳು ಅವರನ್ನು ಸುತ್ತುವರೆದಾಗ ಅಪಹರಣಕಾರರು ೧೯ ಜನರನ್ನು ಕೊಂದಿದ್ದಾರೆ ಹಾಗು ಭದ್ರತಾ ಪಡೆಗಳು ೬ ಜನರನ್ನು ರಕ್ಷಿಸಿದೆ ಎಂದು ಸರ್ಫರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com