ಆತ್ಮಹತ್ಯೆಯಲ್ಲೂ ಜಾತಿ ಲೆಕ್ಕಾಚಾರ

ನೇಗಿಲಯೋಗಿಗಳೆಲ್ಲರ ಜಾತಿಯೂ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ, ಸಮಾರಂಭಗಳಲ್ಲಿ ಭಾಷಣ ಬಿಗಿಯುತ್ತಾರೆ. ಆದರೆ, ಆತ್ಮಹತ್ಯೆ ಮಾಡಿಕೊಂಡ ರೈತರ ಪಟ್ಟಿ ತಯಾರಿಸುವಾಗ ಮಾತ್ರ ರಾಜ್ಯ ಸರ್ಕಾರ ಜಾತಿ ಮಾನದಂಡವನ್ನು ತಂದಿಟ್ಟಿದೆ...
ರೈತರ ಆತ್ಮಹತ್ಯೆ (ಸಂದಾರ್ಭಿಕ ಚಿತ್ರ)
ರೈತರ ಆತ್ಮಹತ್ಯೆ (ಸಂದಾರ್ಭಿಕ ಚಿತ್ರ)

ಬೆಂಗಳೂರು: ನೇಗಿಲಯೋಗಿಗಳೆಲ್ಲರ ಜಾತಿಯೂ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ, ಸಮಾರಂಭಗಳಲ್ಲಿ ಭಾಷಣ ಬಿಗಿಯುತ್ತಾರೆ. ಆದರೆ, ಆತ್ಮಹತ್ಯೆ ಮಾಡಿಕೊಂಡ ರೈತರ  ಪಟ್ಟಿ ತಯಾರಿಸುವಾಗ ಮಾತ್ರ ರಾಜ್ಯ ಸರ್ಕಾರ ಜಾತಿ ಮಾನದಂಡವನ್ನು ತಂದಿಟ್ಟಿದೆ.

ಹೌದು. ರಾಜ್ಯದಲ್ಲಿ ಇದುವರೆಗೆ ೭೬೩ ರೈತರು ಸಾವಿಗೆ ಶರಣಾಗಿದ್ದಾರೆ. ಆದರೆ, ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕೃಷಿ ಇಲಾಖೆ ತಯಾರಿಸಿರುವ ವರದಿಯಲ್ಲಿ ಇಂಥದೊಂದು ಜಾತಿ ಲೆಕ್ಕಾಚಾರ  ನುಸುಳಿದೆ. ರೈತರನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಇತರೆ ಎಂದು ವರ್ಗೀಕರಿಸಲಾಗಿದೆ. ಕೃಷಿ ನಷ್ಟದ ಹೆಸರಿನಲ್ಲಿ ಬದುಕೇ ದುಸ್ತರವಾಗಿರುವುದರಿಂದ  ಮೃತಪಟ್ಟಿರುವ ರೈತರ ವಿಚಾರದಲ್ಲೂ ಸರ್ಕಾರ ಜಾತಿ ಲೆಕ್ಕಾಚಾರ ನಡೆಸುತ್ತಿರುವುದು ಎಷ್ಟು ಸರಿ? ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಪ್ರಾರಂಭವಾಗಿದೆ. ಯಾವ ಉದ್ದೇಶಕ್ಕಾಗಿ  ಜಾತಿ ಆಧಾರದ ಮೇಲೆ ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತರ ವರದಿ ತಯಾರಿಸಲಾಗಿದೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

ಈ ವರದಿಯಲ್ಲಿ ಉಲ್ಲೇಖವಾಗಿರುವ ಮಾಹಿತಿ ಪ್ರಕಾರ, ಇದುವರೆಗೆ ರಾಜ್ಯದಲ್ಲಿ ೭೬೩ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ ೫೬ ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ. ೨೪  ಮಂದಿ ಪರಿಶಿಷ್ಟ ವರ್ಗ ಹಾಗೂ ೨೬ ಮಂದಿ ಹಿಂದುಳಿದ ವರ್ಗದ ರೈತರಿದ್ದಾರೆ. ಉಳಿದ ರೈತರನ್ನು ಇತರೆ ಎಂದು ಪರಿಗಣಿಸಲಾಗಿದೆ. ೨೨೫ ಅರ್ಹ ಪ್ರಕರಣ: ರಾಜ್ಯ ಸರ್ಕಾರ ರೈತರ ಆತ್ಮಹತ್ಯೆ  ಪ್ರಕರಣಗಳ ಸತ್ಯಾಸತ್ಯತೆ ಪರಿಶೀಲನೆಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ೭೬೩ ಹೈಕಿ ಇದುವರೆಗೆ ಕೇವಲ ೨೨೫ ರೈತರ ಸಾವಿನಲ್ಲಿ ಮಾತ್ರ ನಿಜಾಂಶವಿದೆ  ಎಂಬ ತೀರ್ಮಾನಕ್ಕೆ ಬರಲಾಗಿದೆ. ೨೦೨ ಪ್ರಕರಣಗಳನ್ನು ತಿರಸ್ಕರಿಸಲಾಗಿದ್ದು, ೩೩೬ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com