ದೇವರ ಜಮೀನು ಹಕ್ಕಿಗೆ ಸುಪ್ರೀಂಕೋರ್ಟ್ ತೀರ್ಪು

ಸುತ್ತಮುತ್ತಲಿನ ಭೂಮಿಯನ್ನು ತಮ್ಮ ಹೆಸರಿನಲ್ಲಿ ಹೊಂದಿರುವ ಸಾವಿರಾರು ಹಿಂದೂ ದೇವತೆಗಳಿಗೆ ಪರೀಕ್ಷೆಯ ಕಾಲ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on: 
ನವದೆಹಲಿ: ಸುತ್ತಮುತ್ತಲಿನ ಭೂಮಿಯನ್ನು ತಮ್ಮ ಹೆಸರಿನಲ್ಲಿ ಹೊಂದಿರುವ ಸಾವಿರಾರು ಹಿಂದೂ ದೇವತೆಗಳಿಗೆ ಪರೀಕ್ಷೆಯ ಕಾಲ ಬಂದಿದೆ. ದೇವರುಗಳ ಹೆಸರಿನಲ್ಲಿರುವ ಆಸ್ತಿಯ ಹಕ್ಕು ಯಾರಿಗೆ ಸೇರಬೇಕಾದ್ದು ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಮುಂದಾಗಿದೆ. 
ಇದುವರೆಗೆ, ಹಿಂದೂ ದೇವಾಲಯಗಳ ಆಸ್ತಿ ಆಯಾ ದೇವರ ಕಾನೂನುಬದ್ಧ ಹಕ್ಕುದಾರಿಕೆಯಾಗಿರುತ್ತಿತ್ತು. ರಾಮಜನ್ಮಭೂಮಿ ಅಯೋಧ್ಯೆ ಪ್ರಕರಣದಲ್ಲೂ ಅಲಹಾಬಾದ್ ಹೈಕೋರ್ಟ್ ವಿವಾದಿತ ಜಾಗದ 2.7 ಎಕರೆ ಭೂಮಿ ರಾಮ್ ಲಲ್ಲಾನಿಗೇ ಸೇರಿದ್ದು ಎಂದು ತೀರ್ಪು ಬರೆದಿದೆ. ಆದರೆ ರಾಜಸ್ಥಾನ ಹೈಕೋರ್ಟ್, ಈ ಶಾಸನಕ್ಕೆ ಬೇರೆಯದೇ ವ್ಯಾಖ್ಯಾನ ನೀಡಿದೆ. ದೇವತೆಗಳು `ಅಪ್ರಾಪ್ತ ವಯಸ್ಕ (ಮೈನರ್)' ಆಗಿರುವುದರಿಂದ, ಅವರು ಭೂಮಿಯ ಅನುಭೋಗಿಸುವಂತಿಲ್ಲ. ಹೀಗಾಗಿ ದೇವಸ್ಥಾನದ ಜಾಗವು ರಾಜ್ಯ ಸರ್ಕಾರಕ್ಕೇ ಸೇರಬೇಕು ಎಂದು ಹೈಕೋರ್ಟ್ ಹೇಳಿತ್ತು. ಈ ಬಗ್ಗೆ `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. 
ಈ ತೀರ್ಪಿನ ಪರಿಣಾಮ ದೇವಾಲಯದ ಎಲ್ಲ ಜಮೀನೂ ಸರ್ಕಾರದ ಬಳಿಯೇ ಉಳಿಯಲಿದೆ. ದೇವಾಲಯ ನಿರ್ವಹಣೆ ಹಾಗೂ ತಮ್ಮ ಕುಟುಂಬದ ಅನ್ನಕ್ಕಾಗಿ ದೇವಾಲಯದ ಜಮೀನನ್ನೇ ನಂಬಿಕೊಂಡಿದ್ದ ಗ್ರಾಮೀಣ ಭಾಗಗಳ ಲಕ್ಷಾಂತರ ಪುರೋಹಿತರಿಗೆ ಈ ತೀರ್ಪು ಹೊಡೆತ ನೀಡಿದೆ. ಈ ತೀರ್ಪನ್ನು ವಿರೋಧಿಸಿ, ಇದು ತಮ್ಮ ಧಾರ್ಮಿಕ ಹಕ್ಕಿನ ಮೇಲಿನ ಹಲ್ಲೆ ಎಂದು ಸಾರಿ ಮಹಂತ ದಾಮೋದರ ದಾಸ್ ಹಾಗೂ ಸುದರ್ಶನ ದೇವಾಲಯದ ಠಾಕುರ್ ಜಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೋರ್ಟ್ ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 
ಪೂಜಾರಿಯು ಆಯಾ ದೇವಾಲಯದ ಟ್ರಸ್ಟಿಗಳಲ್ಲೊಬ್ಬನಾಗಿದ್ದು, ದೇವಾಲಯಕ್ಕೆ ನೀಡಲಾದ ಜಮೀನನ್ನು ಆತ ಕೈಬಿಡುವಂತಿಲ್ಲ ಎಂದು ಹಳೇ ತೀರ್ಪನ್ನು ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com