

ಮುಂಬೈ: ಬಿ ಸಿ ಸಿ ಐ ಮುಂಬೈ ಕಚೇರಿಗೆ ನುಗ್ಗಿ ಶಿವಸೈನಿಕರು ಪ್ರತಿಭಟನೆ ನಡೆಸಿದ್ದರಿಂದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ನಡುವೆ ನಡೆಯಬೇಕಿದ್ದ ಭೇಟಿ ರದ್ದಾಗಿದೆ.
ಡಿಸೆಂಬರ್ ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡೆವೆ ಕ್ರಿಕೆಟ್ ಸರಣಿ ಆಯೋಜಿಸಲು ಮಾತುಕತೆಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಲಿಯ ಅಧ್ಯಕ್ಷ ಶಾರ್ಯರ್ ಖಾನ್ ಮತ್ತು ನಜಂ ಸೇಥಿ ಭಾರತಕ್ಕೆ ಆಗಮಿಸಿದ್ದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿಯ ನೂತನ ಅಧ್ಯಕ್ಷ ಶಶಾಂಕ್ ಮನೋಹರ ಅವರ ಆಹ್ವಾನದ ಮೇರೆ ಈ ಇಬ್ಬರೂ ಭಾರತಕ್ಕೆ ಬಂದಿದ್ದರು.
ಆದರೆ ಕಪ್ಪು ಬಾವುಟ ಹಿಡಿದ ೭೦ ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರು 'ಪಾಕಿಸ್ತಾನ್ ಮುರ್ದಾಬಾದ್' ಮತ್ತು 'ಶಶಾಂಕ್ ಮನೋಹರ್ ಮುರ್ದಾಬಾದ್' ಎಂಬ ಘೋಷಣೆಗಳನ್ನು ಕೂಗುತ್ತಾ ಬಿಸಿಸಿಐ ಕಚೇರಿ ಒಳಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ನಂತರ ಪೊಲೀಸರು ಅವರಲ್ಲಿ ಹಲವರನ್ನು ಬಂಧಿಸಿದ್ದಾರೆ. ಇದನ್ನು ಕಚೇರಿಯಿಂದಲೇ ಗಮನಿಸುತ್ತಿದ್ದ ಶಶಾಂಕ್ ಮನೋಹರ್ ನಂತರ ಈ ಸಭೆಯನ್ನು ರದ್ದುಗೊಳಿಸಿದ್ದಾರೆ.