ಜೋಗ ಇಂಟರ್‍ನ್ಯಾಷನಲ್!

ಜಗದ್ವಿಖ್ಯಾತ ಜೋಗದಲ್ಲಿ ಸುಮಾರು 700 ಕೋಟಿ ಬಂಡವಾಳ ಹೂಡಲು ಕರ್ನಾಟಕ ಮೂಲದ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ನಿರ್ಧರಿಸಿದ್ದಾರೆ...
ವಿಶ್ವವಿಖ್ಯಾತ ಜೋಗಜಲಪಾತ (ಸಂಗ್ರಹ ಚಿತ್ರ)
ವಿಶ್ವವಿಖ್ಯಾತ ಜೋಗಜಲಪಾತ (ಸಂಗ್ರಹ ಚಿತ್ರ)

ಶಿವಮೊಗ್ಗ: ಜಗದ್ವಿಖ್ಯಾತ ಜೋಗದಲ್ಲಿ ಸುಮಾರು 700 ಕೋಟಿ ಬಂಡವಾಳ ಹೂಡಲು ಕರ್ನಾಟಕ ಮೂಲದ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ನಿರ್ಧರಿಸಿದ್ದಾರೆ.

ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕೊಟ್ಟಿದ್ದಾರೆ. ಅವರ ಉದ್ಯಮ ಪ್ರತಿನಿಧಿ ನೀಡಿರುವ ಮಾಹಿತಿಯಂತೆ ಜೋಗದಲ್ಲಿ ವರ್ಷಪೂರ್ತಿ ನೀರು ಹರಿಯುವಂತೆ ಮಾಡುವ ಯೋಜನೆ,  ಮೂಲಭೂತ ಸೌಕರ್ಯಗಳು, ಸಂಪರ್ಕ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಲಘು ವಿಮಾನ ಇಳಿದಾಣ, ಹೆಲಿಪ್ಯಾಡ್ ನಿರ್ಮಾಣ, ವೆಂಟೆಡ್ ಡ್ಯಾಂ, ಜಲ ವಿದ್ಯುತ್ ಯೋಜನೆ,  ಸೌರವಿದ್ಯುತ್ ಉತ್ಪಾದನೆ ಘಟಕ, ವಿಶ್ವದ ಅತಿ ದೊಡ್ಡ ವಾಟರ್ ಫೌಂಟೇನ್, ಅಂತಾರಾಷ್ಟ್ರೀಯ ಮಟ್ಟದ ಆಸ್ಪತ್ರೆ, 7 ಸ್ಟಾರ್ ಕಾಟೇಜ್, 5 ಸ್ಟಾರ್ ಹೊಟೇಲ್, ಬಜೆಟ್ ಹೊಟೇಲ್, ಸಾವಯವ  ಕೃಷಿ ಫಾರ್ಮ್, ಪಶು ಸಂಗೋಪನೆ ಸೇರಿದಂತೆ ವಿವಿಧ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶ ಹೊಂದಿದ್ದಾರೆ.

ಸರ್ಕಾರದಿಂದ ಬೇಕಾಗಿರುವ ಅನುಮತಿ ದೊರೆತ ಐದು ವರ್ಷಗಳಲ್ಲಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಯೋಜನೆ ಸಿದ್ಧವಾಗಿದೆ. ಇಷ್ಟು ಬಂಡವಾಳ ಹೂಡಿಕೆಯಿಂದ ಕನಿಷ್ಠ ನಾಲ್ಕು  ಸಾವಿರ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಬಿ.ಆರ್.ಶೆಟ್ಟಿಯವರ ಉದ್ಯಮ ಪ್ರತಿನಿಧಿ ವಿವರಿಸಿದರು. ಜೋಗ ಜಲಪಾತದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಎಲ್ಲಾ ಯೋಜನೆಗಳು  ಬೇರೆ ಬೇರೆ ಕಡೆ ಜಾಗದ ಲಭ್ಯತೆ ಮೇಲೆ ಆರಂಭಿಸಬೇಕೆಂಬ ಬಗ್ಗೆ ಚಿಂತನೆ ಇದೆ. ಈ ಯೋಜನೆಗಾಗಿ ಒಂದೇ ಒಂದು ಮರವನ್ನೂ ಕಡಿಯುವುದಿಲ್ಲ, ನಾವೇ ಇನ್ನಷ್ಟು ಮರಗಳನ್ನು ಬೆಳೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com