ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ನ ಅಧ್ಯಕ್ಷ ಯಾಸಿನ್ ಮಲಿಕ್ ನನ್ನು ಮಂಗಳವಾರ ಬಾರಾಮುಲ್ಲ ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾಸಿನ್ ಮಲಿಕ್ ಸೊಫೋರ್ ಗೆ ತೆರಳುತ್ತಿದ್ದ ಮಾರ್ಗಮಧ್ಯದಲ್ಲಿ ಈ ಘಟನೆ ನಡಿದಿದೆ.
ಬಾರಮುಲ್ಲಾದಲ್ಲಿ ನೆನ್ನೆ ನಿಗೂಢವಾಗಿ ಕೊಲೆಯಾದ ಮೂವರು ಯುವಕರ ದೇಹ ಪತ್ತೆಯಾಗಿತ್ತು. ಇದು ಭದ್ರತಾ ಪಡೆಗಳು ಮತ್ತು ಅಲ್ಲಿನ ನಿವಾಸಿಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು.
ಬುಧವಾರ ಬಾರಮುಲ್ಲ ಜಿಲ್ಲೆಯ ಸಂಪೂರ್ಣ ಬಂಧ್ ಗಾಗಿ ಯಾಸಿನ್ ಕರೆ ನೀಡಿದ್ದ. ಮುನ್ನೆಚ್ಚರಿಕಾ ಕ್ರಮವಾಗಿ ಯಾಸಿನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.