ವಿಚಾರವಾದಿಗಳ ಮುತ್ತಿಗೆ

ಸಂಶೋಧಕ ಡಾ.ಎಂ.ಎಂ.ಕಲುಬುರ್ಗಿ ಹತ್ಯೆ ಲಪ್ರಕರಣದ ತನಿಖೆ ವಿಳಂಬಕ್ಕೆ ಆಕ್ರೋಶ ವ್ಯಕ್ತ ಪಡಿಸಿರುವ ಸಾಹಿತಿಗಳು, ವಿಚಾರವಾದಿಗಳು ಮತ್ತು ಮಠಾಧೀಶರು...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನ್ನು ಭೇಟಿಯಾದ ಸಾಹಿತಿಗಳು (ಕೃಪೆ: ಕೆಪಿಎನ್ )
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನ್ನು ಭೇಟಿಯಾದ ಸಾಹಿತಿಗಳು (ಕೃಪೆ: ಕೆಪಿಎನ್ )
Updated on: 

ಬೆಂಗಳೂರು: ಸಂಶೋಧಕ ಡಾ.ಎಂ.ಎಂ.ಕಲುಬುರ್ಗಿ ಹತ್ಯೆ ಪ್ರಕರಣದ ತನಿಖೆ ವಿಳಂಬಕ್ಕೆ ಆಕ್ರೋಶ ವ್ಯಕ್ತ ಪಡಿಸಿರುವ ಸಾಹಿತಿಗಳು, ವಿಚಾರವಾದಿಗಳು ಮತ್ತು ಮಠಾಧೀಶರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನ್ನು ಭೇಟಿಯಾದ ಸಾಹಿತಿಗಳು, ಮಠಾಧೀಶರ ನಿಯೋಗವು ಕಲಬುರ್ಗಿ ಹತ್ಯೆ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿ  ತನಿಖಾ ವೈಖರಿ ಕುರಿತಂತೆಯೂ ಅಸಮಾಧಾನ ಹೊರಹಾಕಿದರು. ನಿಯೋಗದ ಆಗ್ರಹಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲಬುರ್ಗಿ ಹಂತಕರ ಬಗ್ಗೆ ಸುಳಿವು ನೀಡಿದವರಿಗೆ ರು.5 ಲಕ್ಷ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ. ಈ ನಿಯೋಗದ ಜತೆ ಸುಮಾರು ಒಂದು ಗಂಟೆ ಕಾಲ ನಡೆದ ಈ ಸಭೆಯಲ್ಲಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಗೂ, ನಿಮ್ಮ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಕೊಲೆಗಡುಕರ
ನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಸಾಂಸ್ಕೃ ತಿಕ ವಲಯದಲ್ಲಿ ನಿರ್ಮಾಣವಾಗಿರುವ ಆತಂಕ ನಿವಾರಿಸಿ ಎಂದು ಸಾಹಿತಿಗಳು ಆಗ್ರಹಿಸಿದ್ದಾರೆ. ಮತೀಯ ಶಕ್ತಿಗಳ ನಿಯಂತ್ರಣ
ಕ್ಕೆ ಸರ್ಕಾರ ಅಗತ್ಯ ಕ್ರಮ ತೆಗೆದು ಕೊಳ್ಳುತ್ತದೆ ಎಂದು ಸಿಎಂ ಈ ಸಂದರ್ಭದಲ್ಲಿ ನಿಯೋಗಕ್ಕೆ ಮನವರಿಕೆ ಮಾಡಿದರು.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಾಹಿತಿ ಚಂದ್ರಶೇಖರ್ ಪಾಟೀಲ್, ಸರ್ಕಾರದ ವಿರುದ್ಧ ನೇರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಕೆಲವು ಬೇಡಿಕೆಗಳಿಗೆ ಸಿಎಂ ಕೇವಲ ಪರಿಶೀಲಿಸಲಾಗುವುದು ಎಂಬ  ಭರವಸೆ ನೀಡಿದ್ದಾರೆ. ಹೀಗಾಗಿ ಸಭೆ ಸಮಾಧಾನಕರವಾಗಿದೆಯೇ ಹೊರತು ತೃಪ್ತಿಕರ ವಾಗಿಲ್ಲ. ಸಿದ್ದರಾಮಯ್ಯ ಅವರಿಂದ ನಾವು ಇನ್ನಷ್ಟು ದಿಟ್ಟ ನಿಲುವನ್ನು ನಿರೀಕ್ಷೆ ಮಾಡಿದ್ದೆವು. ಕೆಲವು ವಿಚಾರಗಳಲ್ಲಿ ತೇಲಿಸಿ ಮಾತನಾಡಿದ್ದಾರೆ ಎಂದರು.

ಸುಳಿವಿಗೆ  ರು.5 ಲಕ್ಷ ಬಹುಮಾನ: ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಲಬುರ್ಗಿ ಹತ್ಯೆ ಮಾಡಿದವರ ಬಗ್ಗೆ ಯಾರೇ ಸುಳಿವು ನೀಡಿದರೂ ರು.5 ಲಕ್ಷ ಬಹುಮಾನ ನೀಡಲು ಸರ್ಕಾರ ನಿರ್ಧರಿಸಿದೆ. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡ ಲಾಗುವುದು ಎಂದು ಹೇಳಿದರು. ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧ ಎರಡೂ  ನಿಯೋಗದವರು ಮನವಿ ನೀಡಿ ದ್ದಾರೆ. ನಿಡುಮಾಮಿಡಿ ಶ್ರೀಗಳ ನೇತೃತ್ವ ದಲ್ಲಿ ಸ್ವಾಮೀಜಿಗಳು ಹಾಗೂ ಸಾಹಿತಿಗಳ ನಿಯೋಗ ನನ್ನನ್ನು ಭೇಟಿ ಮಾಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಎಲ್ಲ ಬೇಡಿಕೆಗಳು ಹಾಗೂ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದರು.

8 ತಂಡ: ತನಿಖೆಗೆ ವಿಶೇಷ ತನಿಖಾ ದಳ ಸ್ಥಾಪಿಸುವಂತೆ ಸಾಹಿತಿಗಳು ಆಗ್ರಹಿಸಿರುವ ಬಗ್ಗೆ ಪ್ರಶ್ನಿಸಿದಾಗ, ಸಿಐಡಿ ಕೂಡಾ ವಿಶೇಷ ತನಿಖಾ ಸಂಸ್ಥೆ. ಅಲ್ಲಿ ಯೂ ದಕ್ಷ ಅಧಿಕಾರಿಗಳಿದ್ದಾರೆ. ಈಗ 8 ತಂಡ ರಚಿಸಲಾಗಿದೆ. ಎಲ್ಲ ಕೋನಗ ಳಿಂದಲೂ ತನಿಖೆ ನಡೆಯುತ್ತಿದೆ ಎಂದರು. ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಸಾಹಿತಿಗಳು ಮಾಡಿರುವ ಮನವಿ ಬಗ್ಗೆ ಬಗ್ಗೆ ಉತ್ತರಿಸಿದ ಅವರು, ಮೌಢ್ಯ  ನಿಷೇಧದ ಬಗ್ಗೆ ಸರ್ಕಾರ  ಚಿಂತನೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಸ್ತಾಪಗಳು ಸರ್ಕಾರದ ಮುಂದೆ ಇದೆ ಎಂದರು.

ಪ್ರತ್ಯೇಕ ಬೇಡಿಕೆ: ಮೂರು ಪ್ರತ್ಯೇಕ ಬೇಡಿಕೆಗಳು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಮಂಡನೆಯಾಗಿದೆ. ಸ್ವಾಮೀಜಿಗಳು ಹಾಗೂ ಸಾಹಿತಿಗಳು ಆರು ಅಂಶಗಳನ್ನು ಒಳಗೊಂಡ ಹಕ್ಕೊತ್ತಾಯ ಮಂಡಿಸಿದ್ದಾರೆ. ಕಲಬುರ್ಗಿ ಅವರ ಪುತ್ರ ಶ್ರೀವಿಜಯ ಎಂ.ಕಲಬುರ್ಗಿ ಮೂರು ಅಂಶದ ಬೇಡಿಕೆ ಸಲ್ಲಿಸಿದ್ದರೆ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ಬಂಧನಕ್ಕೆ 34 ಸಾಹಿತಿಗಳು ಸಿಎಂ ಸಿದ್ದರಾಮಯ್ಯ ಅವರನ್ನು
ಆಗ್ರಹಿಸಿದ್ದಾರೆ.


ಶ್ರೀವಿಜಯ ಅವರ ಆಗ್ರಹವೇನು ?
- ಸಿಎಂ ಸಿದ್ದರಾಮಯ್ಯ ಅವರೇ ಖುದ್ದು ಆಸ್ಥೆ ವಹಿಸಿ ಸಮರ್ಥ ಮತ್ತು ದಕ್ಷ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಬೇಕು.
-ಹಂತಕರ ಸುಳಿವು ನೀಡಿದವರಿಗೆ ಬಹುಮಾನ ನೀಡಬೇಕು.
-ಹಂತಕರು ಮತ್ತು ಅವರ ಹಿಂದಿನ ಶಕ್ತಿಗಳ ಉದ್ದೇಶ ಬಯಲಾಗಬೇಕು.


ಸಾಹಿತಿಗಳ ಆಗ್ರಹ
- ರಾಜ್ಯ ಪೊಲೀಸ್ ವ್ಯವಸ್ಥೆ ಮೂಲಕವೇ ತನಿಖೆ ನಡೆಯಬೇಕು.
- 3 ವರ್ಷ ಹಿಂದೆ ನಡೆದ ಲಿಂಗಣ್ಣ ಸತ್ಯಂಪೇಟೆ ಅವರ ಕೊಲೆ ಪ್ರಕರಣದ ಮರು ತನಿಖೆ ನಡೆಸಬೇಕು.
-ಹತ್ಯೆ ತನಿಖೆ ವಿಳಂಬವಾದರೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕದಲ್ಲಿ ಇಂಥ ದುರಂತಗಳು ಮರುಕಳಿಸಬಹುದು.
- ತನಿಖೆಯನ್ನು ಇನ್ನಷ್ಟು ತ್ವರಿತಗೊಳಿಸಬೇಕು.
- ಕೋಮು ಭಾವನೆಗೆ ಧಕ್ಕೆ ತರುವವರ ಮೇಲೆ ನಿಯಂತ್ರಣ ಹೇರಬೇಕು.
-ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಬೇಕು.



ಸ್ವಾಮೀಜಿಗಳ ಆಗ್ರಹ
- ಕಲಬುರ್ಗಿ ಅವರ ಹೆಸರಿನಲ್ಲಿ ರಾಷ್ಟ್ರೀಯ ಸಂಶೋಧನಾ ಸಂಸ್ಥೆ ಸ್ಥಾಪನೆ ಮಾಡಬೇಕು ಮತ್ತು ಸಂಶೋಧನ ಪ್ರಶಸ್ತಿ ಘೋಷಣೆ ಮಾಡಬೇಕು.
- ಕಲಬುರ್ಗಿ ಅವರ ಸಮಗ್ರ ಸಂಶೋಧನ ಸಾಹಿತ್ಯವನ್ನು ಸರ್ಕಾರ ಮುದ್ರಿಸಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ದೊರಕಿಸಬೇಕು.
- ತನಿಖಾ ಲೋಪದ ಆತಂಕ, ಎಸ್‍ಐಟಿ ರಚಿಸಿ.
-ಆಕ್ರಮಣಶೀಲ ಮತೀಯ ಸಂಘಟನೆಗಳನ್ನು ನಿಷೇಧ ಮಾಡಬೇಕು.
- ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರಬೇಕು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com