ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶೆಟ್ಟರ್, ಕಳೆದ ಐದಾರು ತಿಂಗಳಿಂದ ರಾಜ್ಯದಲ್ಲಿ ಬರಗಾಲ ಇದೆ. ಕಂದಾಯ ಸಚಿವರು ವಿಭಾಗ ಮಟ್ಟದ ಸಭೆ ಮಾಡಿ ಸುಮ್ಮನಾದ್ರು. ಬಿಜೆಪಿ ಜಿಲ್ಲಾವಾರು ಪ್ರವಾಸ ಶುರು ಮಾಡುತ್ತಿದ್ದ್ದತೆ ಸಿಎಂ ಎಚ್ಚೆತ್ತುಕೊಂಡು ಪ್ರವಾಸ ಮಾಡ್ತಿದ್ದಾರೆ. ಸಿಎಂ ಹಾಗೂ ಸಚಿವರ ಪ್ರವಾಸ ಪರಿಶೀಲನೆ ಕೇವಲ ಕಾಟಾಚಾರಕ್ಕಷ್ಟೇ ನಡೆಯುತ್ತಿದೆ. ಅಧಿಕಾರಿಗಳೂ ಸಚಿವರು, ಸಿಎಂ ಎದುರಿಗೆ ಬರ ಪರಿಹಾರದ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.