ವಿಜಯ್ ಮಲ್ಯ ಸದಸ್ಯತ್ವ ರದ್ದತಿಗೆ ರಾಜ್ಯಸಭಾ ನೀತಿ ಸಮಿತಿ ಶಿಫಾರಸು

ಲಂಡನ್ ನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಸಾಲದ ದೊರೆ ವಿಜಯ್ ಮಲ್ಯ ಅವರಿಗೆ ಈಗ ಮತ್ತೊಂದು ಕಂಟಕ ಎದುರಾಗಿದೆ.
ವಿಜಯ್ ಮಲ್ಯ
ವಿಜಯ್ ಮಲ್ಯ
ನವದೆಹಲಿ: ಲಂಡನ್ ನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಸಾಲದ ದೊರೆ ವಿಜಯ್ ಮಲ್ಯ ಅವರಿಗೆ ಈಗ ಮತ್ತೊಂದು ಕಂಟಕ ಎದುರಾಗಿದೆ. 
ವಿವಿಧ ಬ್ಯಾಂಕ್ ಗಳಿಂದ ಸಾಲ ಪಡೆದು ಮರುಪಾವತಿಸದೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರ ರಾಜ್ಯಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಸೋಮವಾರ ರಾಜ್ಯಸಭಾ ನೀತಿ ಸಂಹಿತೆ ಸಮಿತಿ ಶಿಫಾರಸು ಮಾಡಿದೆ.
ಮಲ್ಯ ಅವರ ಸದಸ್ಯತ್ವ ರದ್ದುಗೊಳಿಸಲು ಮುಂದಾಗಿರುವ ಸಂಸತ್ ನೀತಿ ಸಂಹಿತೆ ಸಮಿತಿ, ಸದಸ್ಯತ್ವದ ಬಗ್ಗೆ 8 ದಿನಗಳಲ್ಲಿ ಉತ್ತರ ನೀಡುವಂತೆ ಮದ್ಯದ ದೊರೆಗೆ ನೋಟೀಸ್ ನೀಡಿದೆ. ಒಂದು ವೇಳೆ ಮಲ್ಯ ಅವರು ಇದಕ್ಕೆ ಉತ್ತರ ನೀಡದಿದ್ದಲ್ಲಿ ರಾಜ್ಯ ಸಭಾ ಸದಸ್ವತ್ಯವು ರದ್ದುಗೊಳ್ಳಲಿದೆ.
ಮತ್ತೆ ಮೇ 3ರಂದು ನೀತಿ ಸಂಹಿತೆ ಸಮಿತಿ ಸಭೆ ಸೇರಲಿದ್ದು, ಅಂದು ಮಲ್ಯ ಸದಸ್ಯತ್ವ ರದ್ದುಗೊಳಿಸುವ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಿದೆ.
17 ವಿವಿಧ ಬ್ಯಾಂಕುಗಳಲ್ಲಿ 9000 ಕೋಟಿ ಸಾಲ ಪಡೆದಿರುವ ವಿಜಯ್ ಮಲ್ಯ ಈಗ ವಿದೇಶದಲ್ಲಿ ನೆಲೆಸಿದ್ದಾರೆ. ಸಾಲಮರುಪಾವತಿ ಬಗ್ಗೆ ಮೂರು ಬಾರಿ ನೊಟೀಸ್ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅವರ ಪಾಸ್ ಪೋರ್ಟ್ ಅನ್ನು ಸಹ ರದ್ದು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com