ರಾಜ್ಯದಲ್ಲಿ ಸದ್ಯ ಬರ ಪರಿಸ್ಥಿತಿ ಇಲ್ಲ: ಎಚ್.ಕೆ. ಪಾಟೀಲ್

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀರಿಲ್ಲದೇ ಜನ ತತ್ತರಿಸುತ್ತಿದ್ದರೆ, ರಾಜ್ಯದಲ್ಲಿ ಸದ್ಯ ಬರಗಾಲ ಪರಿಸ್ಥಿತಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ....
ಎಚ್.ಕೆ. ಪಾಟೀಲ್
ಎಚ್.ಕೆ. ಪಾಟೀಲ್
Updated on: 
ಕಲಬುರ್ಗಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀರಿಲ್ಲದೇ ಜನ ತತ್ತರಿಸುತ್ತಿದ್ದರೆ, ರಾಜ್ಯದಲ್ಲಿ ಸದ್ಯ ಬರಗಾಲ ಪರಿಸ್ಥಿತಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ಮಂಗಳಾವರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಕೆ.ಪಾಟೀಲ್ ಅವರು, ಸದ್ಯ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ. ಅಂತ್ಯಂತ ಕಠಿಣ ಬೇಸಿಗೆ ಇರುವುದಿರಂದ ನೀರಿನ ಅಭಾವ ಇದೆ ಎಂದರು. ಅಲ್ಲದೆ ಯಾವಾಗ ಬಿತ್ತನೆ ಸಾಧ್ಯವಿಲ್ಲವೋ ಅಂತಹ ಸಮಯವನ್ನು ಬರಗಾಲವೆಂದು ಕರೆಯಬಹುದು ಎಂದು ಬರಗಾಲಕ್ಕೆ ಹೊಸ ವ್ಯಾಖ್ಯೆ ನೀಡಿದ್ದಾರೆ.
ಉನ್ನು ಸಚಿವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೈತ ಮುಖಂಡರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಪ್ರವಾಸ ಯಾಕೆ ಕೈಗೊಂಡಿದ್ದು ಎಂದು ಪ್ರಶ್ನಿಸಿದ್ದಾರೆ. ಸಚಿವರೇ ಎಸಿ ಕಾರಿನಲ್ಲಿ ಕುಳಿತು ಇಂತಹ ಮಾತುಗಳನ್ನಾಡಬೇಡಿ. ಬದಲಾಗಿ ಕಾರಿನಿಂದ ಇಳಿದು ಬರ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com