ಪಾಕಿಸ್ತಾನದವರು ಒಳ್ಳೆಯವರಾದರೆ ರಮ್ಯಾ ಅಲ್ಲೇ ಹೋಗಿ ನೆಲೆಸಲಿ: ಪ್ರಹ್ಲಾದ್ ಜೋಷಿ

ಪಾಕಿಸ್ತಾನಿಯರು ಒಳ್ಳೆಯವರಾದರೆ ಅವರು ಅಲ್ಲೇ ನೆಲೆಸಲಿ ಎಂದು ಪ್ರಹ್ಲಾದ್ ಜೋಷಿ ಸಲಹೆ ನೀಡಿದ್ದಾರೆ.
ಪ್ರಹ್ಲಾದ್ ಜೋಷಿ
ಪ್ರಹ್ಲಾದ್ ಜೋಷಿ
Updated on: 

ಹುಬ್ಬಳ್ಳಿ: ಪಾಕಿಸ್ತಾನ ನರಕ ಅಲ್ಲ, ಅಲ್ಲಿನ ಜನತೆ ತುಂಬಾ ಒಳ್ಳೆಯವರು ಎಂದು ಹೊಗಳಿದ್ದ ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಿಯರು ಒಳ್ಳೆಯವರಾದರೆ ಅವರು ಅಲ್ಲೇ ನೆಲೆಸಲಿ ಎಂದು ಪ್ರಹ್ಲಾದ್ ಜೋಷಿ ಸಲಹೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಪ್ರಹ್ಲಾದ್ ಜೋಷಿ, ರಮ್ಯಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕಿಸ್ತಾನದವರು ಒಳ್ಳೆಯವರಾದರೆ, ರಮ್ಯಾ ಅವರು ಅವರ ಪಕ್ಷದ ನಾಯಕರಾದ ದಿಗ್ವಿಜಯ್ ಸಿಂಗ್, ರಾಹುಲ್ ಗಾಂಧಿ ಅವರೊಂದಿಗೆ ಪಾಕಿಸ್ತಾನದಲ್ಲೇ ಹೋಗಿ ನೆಲೆಸಲಿ, ಹೇಗಿದ್ದರೂ ಅವರ ಪಕ್ಷ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದೆ ಎಂದು ಸಲಹೆ ನೀಡಿದ್ದಾರೆ.

ಮಂಡ್ಯದಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ನಟಿ, ಮಾಜಿ ಸಂಸದೆ ರಮ್ಯಾ,  ನಾನು ಪಾಕಿಸ್ತಾನಕ್ಕೆ ಹೋಗಿದ್ದಾಗ ಅಲ್ಲಿನ ಜನ ನನ್ನ ಚೆನ್ನಾಗಿಯೇ ನೋಡಿಕೊಂಡರು. ಪಾಕ್ ನಲ್ಲಿ ಎಲ್ಲವೂ ಸರಿಯಿದೆ, ಎಲ್ಲರೂ ಸಹಕರಿಸುತ್ತಾರೆ ಎಂದು ಹೇಳಿದ್ದರು. ರಮ್ಯಾ ಅವರ ಈ ಹೇಳಿಕೆಗೆ ಅವರು ಈ ಹಿಂದೆ ಪ್ರತಿನಿಧಿಸುತ್ತಿದ್ದ ಮಂಡ್ಯದಲ್ಲೇ ವಿರೋಧ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com