ತಿರುವನಂತಪುರಂ: ತಮ್ಮ ಪತಿ ಹಿಂದೂ ಧರ್ಮಕ್ಕೆ ಹಿಂದಿರುಗಳಿದ್ದಾರೆ ಎಂಬ ಸುದ್ದಿ ಶುದ್ಧ ಸುಳ್ಳು ಎಂದಿದ್ದಾರೆ ಖ್ಯಾತ ಗಾಯಕ ಕೆ ಜೆ ಯೇಸುದಾಸ್ ಅವರ ಪತ್ನಿ ಪ್ರಭಾ ಯೇಸುದಾಸ್.
"ಈ ಸುದ್ದಿ ಹೇಗೆ ಪ್ರಚಾರವಾಯಿತೋ ನನಗೆ ತಿಳಿಯದು ಆದರೆ ಇದು ಸುಳ್ಳು" ಎಂದು ಪ್ರಭಾ ಟಿವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಬುಧವಾರ ಟ್ವೀಟ್ ಮಾಡಿದ್ದ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಸ್ವಾಮಿ ಟ್ವೀಟ್ ಮಾಡಿ "ಟ್ವಿಟ್ಟರ್ ಸುದ್ದಿಯ ಪ್ರಕಾರ ಯೇಸುದಾಸ್ ತಮ್ಮ ಪೂರ್ವಿಕರ ಹಿಂದೂ ಧರ್ಮಕ್ಕೆ ಹಿಂದಿರುಗುತ್ತಿರುವುದನ್ನು ಎಲ್ಲರೂ ಸ್ವಾಗತಿಸೋಣ" ಎಂದಿದ್ದರು.
Let us all Virat Hindus welcome the twitter news, if true, that famous singer Yesudas has returned to the religion of hisHindu ancestors.
ಜನವರಿಯಲ್ಲಿ ತಮ್ಮ ಹುಟ್ಟು ಹಬ್ಬದ ದಿನದಂದು 76 ವರ್ಷದ ಯೇಸುದಾಸ್ ಕುಟುಂಬದೊಂದಿಗೆ ಮಂಗಳೂರಿನ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಸಂಗೀತ ಗೌರವ ಸಲ್ಲಿಸಿದ್ದರು.
ಸ್ವಾಮಿ ಗುರುವಾಯೂರಪ್ಪನ್ ಮೇಲೆ ಹಲವಾರು ಗೀತೆಗಳನ್ನು ಹಾಡಿದ್ದರು ಶಾಸ್ತ್ರೀಯ ಸಂಗೀತಕಾರ ಯೇಸುದಾಸ್ ಹಿಂದೂ ಧರ್ಮೀಯರಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಗುರುವಾಯೂರ್ ನ ಶ್ರೀ ಕೃಷ್ಣ ದೇವಾಲಯಕ್ಕೆ ಪ್ರವೇಶ ನಿರಾಕರಿಸಿದ್ದ ಸಂಗತಿ ಈ ಹಿಂದೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
14 ವಿವಿಧ ಭಾಷೆಗಳಲ್ಲಿ 45000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಯೇಸುದಾಸ್, ಪದ್ಮಶ್ರೀ, ಪದ್ಮ ಭೂಷಣ ಅಲ್ಲದೆ ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.