ಮುಂಬೈ: ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಒಂದು ದಿನವಷ್ಟೇ ಬಾಕಿಯಿದ್ದು, ಶಿವಸೇನಾ ಕಾರ್ಯಕ್ರತರು ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಲಾರ್ ಅವರ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಬಿಜೆಪಿ ಪಕ್ಷದ ಬಗ್ಗೆ ಆಗಾಗ್ಗೆ ಎತ್ತಿರುವ ಆಕ್ಷೇಪಗಳನ್ನು 'ರಾಕ್ಷಸ' ಎಂದಿದ್ದಕ್ಕೆ ಶಿವಸೇನೆ ಕಾರ್ಯಕರ್ತರು ಕುಪಿತರಾಗಿದ್ದಾರೆ.