ವಿದ್ಯಾರ್ಥಿಯನ್ನು ರೇಪ್ ಮಾಡಿದ ಆರೋಪ; ಕಾಶ್ಮೀರದಲ್ಲಿ ಶಿಕ್ಷಕ ಬಂಧನ

ಜಮ್ಮು ನಗರದ ಹೊರವಲಯದಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಯನ್ನು ರೇಪ್ ಮಾಡುತ್ತಿದ್ದ ಆರೋಪದಲ್ಲಿ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಜಮ್ಮು: ಜಮ್ಮು ನಗರದ ಹೊರವಲಯದಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಯನ್ನು ರೇಪ್ ಮಾಡುತ್ತಿದ್ದ ಆರೋಪದಲ್ಲಿ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
2014 ರಲ್ಲಿ ಖಾಸಗಿ ಪಾಠಕ್ಕೆ ಸೇರಿದಾಗಿಲಿಂದಲೂ ಆರ್ ಎಸ್ ಪುರದ ಬೋಧ್ ರಾಜ್ ಎನ್ನುವವ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೇ ಎಂದು ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಮೇರೆಗೆ ಶಿಕ್ಷಕನನ್ನು ನೆನ್ನೆ ಪೊಲೀಸರು ಬಂಧಿಸಿದ್ದಾರೆ. 
"ಖಾಸಗಿ ಪಾಠಕ್ಕೆ ಸೇರಿಕೊಂಡಾಗಿಲಿಂದಲೂ ಎರಡು ವರ್ಷಗಳಿಂದ ಆರೋಪಿ ಬಾಲಕಿ ಮೇಲೆ ರೇಪ್ ಮಾಡುತ್ತಿದ್ದು, ಈ ವಿಷಯ ಹೊರಗೆ ತಿಳಿಸಬಾರದೆಂದು ಬೆದರಿಕೆ ಕೂಡ ಹಾಕಿದ್ದ " ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ಕೊನೆಗೂ ಧೈರ್ಯ ತಾಳಿ ತನ್ನ ಪರಿಸ್ಥಿತಿಯನ್ನು ತನ್ನ ತಾಯಿಗೆ ಹೇಳಿಕೊಂಡ ನಂತರ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಮಾಡಿದ ನಂತರ ರೇಪ್ ಗೆ ಒಳಗಾಗಿರುವುದು ಧೃಢಪಟ್ಟಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. 
ಈ ತನಿಖೆಗಳಲ್ಲಿ ಬೇರೆ ಅಂಶಗಳು ಬೆಳಕಿಗೆ ಬಂದಿದ್ದು, 1999 ರಿಂದ ಈ ವ್ಯಕ್ತಿ ವಿವಾಹದ ಆಚೆಗೆ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದ. "ಈ ಮಹಿಳೆ ಬೋಧ್ ರಾಜ್ ನೊಂದಿಗೆ ಸೇರಿ ಆಗಸ್ಟ್ 1999 ರಲ್ಲಿ ತನ್ನ ಪತಿಯನ್ನು ಕೊಂದಿದ್ದಳು. ಅದಕ್ಕಾಗಿ ಇಬ್ಬರಿಗೂ 10 ವರ್ಷದ ಜೈಲು ಸಜೆಯಾಗಿತ್ತು" ಎಂದು ಅಧಿಕಾರಿ ಹೇಳಿದ್ದಾರೆ. 
ಜೈಲಿನಿಂದ ಬಿಡುಗಡೆಯಾದ ನಂತರ 2012 ರಿಂದ ಇವರಿಬ್ಬರು ಜೊತೆಗೆ ವಾಸಿಸುತ್ತಿದ್ದರು ಆದರೆ ಆ ಮಹಿಳೆಯು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ನಂತರ ಆರ್ ಎಸ್ ಪುರಕ್ಕೆ ಬಂದ ಬೋಧ್ ರಾಜ್ ಖಾಸಗಿ ಪಾಠ ಮಾಡುವುದಕ್ಕೆ ಪ್ರಾರಂಭಿಸಿದ್ದಾನೆ. 
ಈ ಆರೋಪಿ ಇನ್ನಿತರ ವಿದ್ಯಾರ್ಥಿನಿಯರಿಗೂ ಲೈಂಗಿಕ ಕಿರುಕುಳ ನೀಡಿರುವ ಸಾಧ್ಯತೆ ಇದೆ ಎಂದಿದ್ದಾರೆ ಪೊಲೀಸರು. "ನಾವು ತನಿಖೆ ನಡೆಸುತ್ತಿದ್ದೇವೆ, ಹಲವಾರು ಕಾರಣಗಳಿಂದ ವಿದ್ಯಾರ್ಥಿನಿಯರು ಹೆದರಿ ತಮಗೆ ಆದ ಹಿಂಸೆಯನ್ನು ಮುಚ್ಚಿಟ್ಟಿರುವ ಸಾಧ್ಯತೆ ಇದೆ" ಎಂದು ಕೂಡ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com