ಬೆಂಗಳೂರು: ಟರ್ಕಿಯ ಸೇನಾ ದಂಗೆಯಲ್ಲಿ ಸಿಲುಕಿದ್ದ ಕರ್ನಾಟಕದ ಅಂತರಾಷ್ಟ್ರೀಯ ಕುಸ್ತಿ ಪಟು ಅರ್ಜುನ್ ಅವರು ಸುರಕ್ಷಿತವಾಗಿದ್ದಾರೆ.
ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಬಾಗಲಕೋಟೆ ಮೂಲದ ಅರ್ಜುನ್ ಅವರು ಟರ್ಕಿಯಿಂದ ಇಂದು ಭಾರತಕ್ಕೆ ವಾಪಸ್ ಆಗಬೇಕಿತ್ತು. ಆದರೆ ಟರ್ಕಿಯಲ್ಲಿ ಸೇನಾ ಪಡೆಗಳು ಕ್ಷಿಪ್ರಕಾಂತಿ ನಡೆಸಿದ ಪರಿಣಾಮ ಅವರು ಸದ್ಯಕ್ಕೆ ಟರ್ಕಿಯಲ್ಲೇ ಉಳಿದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ದಾವಣಗೆರೆಯಲ್ಲಿರುವ ಅರ್ಜುನ್ ಅವರ ಕೋಚ್ ಶಿವಾನಂದ್ ಅವರು, ನಾನು ಅರ್ಜನ್ ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಅವರು ಸುರಕ್ಷಿತವಾಗಿದ್ದಾರೆ ಮತ್ತು ಪರಿಸ್ಥಿತ ಸಹಜ ಸ್ಥಿತಿಗೆ ಮರಳಿದ ನಂತರ ದೇಶಕ್ಕೆ ಆಗಮಿಸುತ್ತಾರೆ ಎಂದು ಹೇಳಿದ್ದಾರೆ.
ಟರ್ಕಿಯಲ್ಲಿರುವ 57 ಭಾರತೀಯ ಕ್ರೀಡಾಪಟುಗಳು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಹೇಳಿದ್ದಾರೆ.