

ಔರಂಗಾಬಾದ್: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನಿಜಾಮರ ಆಡಳಿತಕ್ಕಿಂತ ಕೆಟ್ಟದಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಅಂದಿನ ಹೈದ್ರಾಬಾದ್ ರಾಜ್ಯದ ಮುಸ್ಲಿಂ ನಿಜಾಮನ ಅವಧಿಯಲ್ಲಿ ಔರಂಗಾಬಾದ್ ಮತ್ತು ಮರಾಠವಾಡಾದ ಕೆಲ ಪ್ರದೇಶಗಳು ಕೂಡಾ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದವು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವ ಶಿವಸೇನೆ, ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ಮುಂದುವರಿಸಿದೆ. ಬಿಜೆಪಿ ಸರ್ಕಾರ ನಿಜಾಮ್ ನ ಅಪ್ಪನ ಸರ್ಕಾರದಂತಾಗಿದೆ ಎಂದು ರಾವತ್ ಟೀಕಿಸಿದ್ದಾರೆ.
ಪ್ರಧಾನಿಯವರ ಬಗ್ಗೆ ಯಾವಾಗ ಕೇಳಿದರೂ ಸ್ವಿಟ್ಜರ್‌ಲೆಂಡ್, ಲಂಡನ್, ಫ್ರಾನ್ಸ್ ಇರಾನ್ ಅಥವಾ ಇನ್ನಾವುದೋ ದೇಶದಲ್ಲಿದ್ದಾರೆ ಎನ್ನುವುದು ಕೇಳಿಬರುತ್ತಿದೆ ಎಂದು ಲೇವಡಿ ಮಾಡಿದರು.
ಕಳೆದ ವಿಧಾನಸಭೆ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಬಿಜೆಪಿ ಅಸ್ತಿತ್ವವೇ ಇರದ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಹಲವಾರು ಬಾರಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡರು. ಆದರೆ, ಬರಗಾಲ ಪೀಡಿತ ಮರಾಠವಾಡಕ್ಕೆ ಭೇಟಿ ನೀಡಲಿಲ್ಲ ಎಂದು ಕಿಡಿಕಾರಿದರು.