ಕಾಶ್ಮೀರದಲ್ಲೂ ನಡೆಯಿತು ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕಣಿವೆ ರಾಜ್ಯ ಕಾಶ್ಮೀರದಲ್ಲೂ ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆದಿದೆ.
ಕಾಶ್ಮೀರದಲ್ಲೂ ನಡೆಯಿತು ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಕಾಶ್ಮೀರದಲ್ಲೂ ನಡೆಯಿತು ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Updated on: 

ಜಮ್ಮು/ ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲೂ ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆದಿದೆ.

ಮೌಲಾನ ಆಜಾದ್ ಸ್ಟೇಡಿಯಂ ನಲ್ಲಿ ಯೋಗ ದಿನಾಚರಣೆ ನಡೆದಿದ್ದು, ನೂರಾರು ಜನರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯೋಗಾಭ್ಯಾಸ ಮಾಡಿದ್ದಾರೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಯೋಗ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಪೈಕಿ ಬಹುತೇಕ ಯುವಕ ಯುವತಿಯರಿದ್ದರು.

ಮೌಲಾನಾ ಆಜಾದ್ ಸ್ಟೇಡಿಯಂ ನಲ್ಲಿ ನಡೆದ ಕಾರ್ಯಕ್ರಮದ ಮಾದರಿಯಲ್ಲೇ ಶ್ರೀನಗರದ ಲೇಹ್, ಲಡಾಕ್  ಹಾಗೂ ಕಾರ್ಗಿಲ್ ನಲ್ಲೂ ಯೋಗ ದಿನಾಚರಣೆ ನಡೆದಿದೆ. ಇನ್ನು ಜಮ್ಮು ಪ್ರದೇಶದಲ್ಲಿರುವ ಉಧಂಪುರದ ಸೇನಾ ಪ್ರಧಾನ ಕಚೇರಿಯಲ್ಲೂ ಸಹ ಯೋಧರು ಯೋಗ ದಿನವನ್ನು ಆಚರಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಸೇನಾ ಅಧಿಕಾರಿಯೊಬ್ಬರು, ಯೋಗ ಸೇನೆಯಲ್ಲಿರುವವರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com