ಚೀನಾದ ಹಠಮಾರಿ ವರ್ತನೆ: ಸಿಯೋಲ್ ಅಧಿವೇಶನದಲ್ಲೂ ನಿರ್ಣಯವಿಲ್ಲ!

ಪರಮಾಣು ಪೂರೈಕೆದಾರರ ಒಕ್ಕೂಟ ಸೇರುವ ಭಾರತದ ಮಹದಾಸೆಗೆ ಚೀನಾ ಮತ್ತೆ ತಣ್ಣೀರೆರಚಿದ್ದು, ಚೀನಾ ಸೇರಿದಂತೆ 10 ರಾಷ್ಟ್ರಗಳ ಭಾರತದ ಎನ್ ಎಸ್ ಜಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವಲ್ಲಿ ಸಿಯೋಲ್ ಅಧಿವೇಶನ ಕೂಡ ವಿಫಲವಾಗಿದೆ.
ತಾಷ್ಕೆಂಟ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ (ಪಿಟಿಐ ಚಿತ್ರ)
ತಾಷ್ಕೆಂಟ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ (ಪಿಟಿಐ ಚಿತ್ರ)

ಸಿಯೋಲ್: ಪರಮಾಣು ಪೂರೈಕೆದಾರರ ಒಕ್ಕೂಟ ಸೇರುವ ಭಾರತದ ಮಹದಾಸೆಗೆ ಚೀನಾ ಮತ್ತೆ ತಣ್ಣೀರೆರಚಿದ್ದು, ಚೀನಾ ಸೇರಿದಂತೆ 10 ರಾಷ್ಟ್ರಗಳ ಭಾರತದ ಎನ್ ಎಸ್ ಜಿ ಸೇರ್ಪಡೆಗೆ  ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವಲ್ಲಿ ಸಿಯೋಲ್ ಅಧಿವೇಶನ ಕೂಡ ವಿಫಲವಾಗಿದೆ.

ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಅಂತಿಮ ದಿನವಾದ ಶುಕ್ರವಾರವೂ ಚೀನಾ ಸೇರಿದಂತೆ 10 ರಾಷ್ಟ್ರಗಳು ಭಾರತದ ಎನ್ ಎಸ್ ಜಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ  ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ಮತ್ತು ಎನ್ ಎಸ್ ಜಿ ಸೇರ್ಪಡೆಗೆ ಬೆಂಬಲ ಕೋರಿದ ಹೊರತಾಗಿಯೂ ಚೀನಾ ತನ್ನ ಹಠಮಾರಿ ತನ ಮುಂದುವರೆಸಿದೆ. ತಾಷ್ಕೆಂಟ್ ಭೇಟಿ ವೇಳೆ  ಭಾರತದ ಪರ ಮೃಧು ಧೋರಣೆ ತಳೆದಿದ್ದ ಚೀನಾ, ಸಿಯೋಲ್ ಅಧಿವೇಶನದಲ್ಲಿ ಮತ್ತೆ ತನ್ನ ಹಳೆಯ ಛಾಳಿ ಮುಂದುವರೆಸಿದೆ. ಹೀಗಾಗಿ ಸಿಯೋಲ್ ಅಧಿವೇಶನದಲ್ಲಿಯೂ ಯಾವುದೇ ನಿರ್ಣಯ  ಕೈಗೊಳ್ಳುವಲ್ಲಿ ಸಭೆ ವಿಫಲವಾಗಿದೆ.

48 ಸದಸ್ಯ ರಾಷ್ಟ್ರದ ಒಟ್ಟು 300 ಪ್ರತಿನಿಧಿಗಳು ಶುಕ್ರವಾರ ಸಿಯೋಲ್ ನಡೆದ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಒಟ್ಟು 48 ರಾಷ್ಟ್ರಗಳ ಪರಮಾಣು ಪೂರೈಕೆದಾರರ ಒಕ್ಕೂಟದಲ್ಲಿ ಭಾರತದ  ಎನ್ ಎಸ್ ಜಿ ಸೇರ್ಪಡೆ ವಿಚಾರಕ್ಕೆ ಅಮೆರಿಕ ಸೇರಿದಂತೆ 38 ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿದ್ದು, ಚೀನಾ ಸೇರಿದಂತೆ 10 ರಾಷ್ಟ್ರಗಳು ಮಾತ್ರ ವಿರೋಧ ವ್ಯಕ್ತಪಡಿಸಿವೆ. ಚೀನಾ ಹೊರತು  ಪಡಿಸಿದರೆ ಬ್ರೆಜಿಲ್, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಐರ್ಲೆಂಡ್, ಟರ್ಕಿ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ದೇಶಗಳು ತೀವ್ರವಿರೋಧ ವ್ಯಕ್ತಪಡಿಸುತ್ತಿವೆ. ಈ ಪೈಕಿ ಬ್ರೆಜಿಲ್ ಮತ್ತು  ಆಸ್ಟ್ರೇಲಿಯಾ ಭಾರತಕ್ಕೆ ಸದಸ್ಯತ್ವ ನೀಡುವುದರಲ್ಲಿ ತಮ್ಮ ವಿರೋಧವಿಲ್ಲ, ಆದರೆ ನಿಯಮಾನುಸಾರವೇ ಸದಸ್ಯತ್ವ ಸೇರ್ಪಡೆಯಾಗಬೇಕು ಎಂದು ಹೇಳಿದೆ.

ಪಾಕಿಸ್ತಾನದ ಬೆನ್ನಿಗೆ ನಿಂತಿರುವ ಚೀನಾ ಸದಸ್ಯವಲ್ಲದ ರಾಷ್ಟ್ರಕ್ಕೆ ಸದಸ್ಯತ್ವ ನೀಡಲು ಅಳವಡಿಸಿರುವ ಮಾನದಂಡದಂತೆಯೇ ನೂತನ ಸದಸ್ಯರ ನೇಮಕವಾಗಬೇಕು ಎಂದು ಆಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com