
ಜಿನೀವಾ: ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಸೇರ್ಪಡೆಯಾಗುವ ಭಾರತದ ಕನಸಿಗೆ ಮತ್ತೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ಅಡ್ಡಗಾಲು ಹಾಕಿದ್ದು, ಕೈಮೀರುವ ಪ್ರಯತ್ನ ಬಂದರೆ ತನ್ನ ವೆಟೋ ಅಧಿಕಾರವನ್ನು ಬಳಕೆ ಮಾಡುವ ಮೂಲಕ ಭಾರತವನ್ನು ತಡೆಯಲು ಚೀನಾ ಪ್ರಯತ್ನಿಸಿದೆ ಎಂದು ಅಮೆರಿಕದ ಉನ್ನತ ಮೂಲಗಳು ತಿಳಿಸಿವೆ.
ಅಮೆರಿಕ ಸರ್ಕಾರದ ಉನ್ನತ ಮೂಲಗಳ ಪ್ರಕಾರ ಭಾರತವನ್ನು ಹೇಗಾದರೂ ಸರಿ ಎನ್ ಎಸ್ ಜಿ ಸಮೂಹದಿಂದ ದೂರವಿಡಲು ಪಾಕಿಸ್ತಾನ ಮತ್ತು ಚೀನಾ ದೇಶಗಳು ಜಂಟಿಯಾಗಿ ರಹಸ್ಯ ಷಡ್ಯಂತ್ರ ಹೆಣೆಯುತ್ತಿದ್ದು, ಏಪ್ರಿಲ್ 25-26ರ೦ದು ನಡೆದ ಎನ್‍ಎಸ್‍ಜಿ ಸಲಹೆಗಾರರ ಸಭೆಯಲ್ಲಿ ಬೇಡಿಕೆ ಸಲ್ಲಿಸುವುದಕ್ಕೆ ಸ೦ಬ೦ಧಿಸಿದ೦ತೆ ಚೀನಾದ ಬೆ೦ಬಲದೊ೦ದಿಗೆ ಪಾಕಿಸ್ತಾನ ಅಜಿ೯ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಇನ್ನು ವಿಶ್ವಸಂಸ್ಥೆಯ ಎನ್ ಎಸ್ ಜಿ ಸಮೂಹದಲ್ಲಿ ಭಾಗಿದಾರನಾಗುವ ಕುರಿತು ಭಾರತ ಸದಸಸ್ಯತ್ವ ಅಜಿ೯ ಸಲ್ಲಿಸುವ ವಿಚಾರ ತಿಳಿದೇ ಪಾಕಿಸ್ತಾನ ಚೀನಾದೊಂದಿಗೆ ಸೇರಿ ಈ ಮನವಿ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನ ತನ್ನ ಅರ್ಜಿ ತಿರಸ್ಕೃತವಾಗುತ್ತದೆ ಎಂದು ತಿಳಿದಿದ್ದರೂ ಭಾರತದ ಬೇಡಿಕೆ ಈಡೇರಬಾರದು ಎಂಬ ಒಂದೇ ಗುರಿಯಿಂದ ತನ್ನ ಬೇಡಿಕೆ ಮುಂದಿಟ್ಟಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಸರತಿ ಪ್ರಕಾರ ಬೇಡಿಕೆ ಅರ್ಜಿಗಳ ಕುರಿತು ವಿಶ್ವಸಂಸ್ಥೆಯ ಎನ್ಎಸ್ ಜಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಭಾರತಕ್ಕಿಂತ ಮೊದಲೇ ಪಾಕಿಸ್ತಾನ ಅರ್ಜಿ ಸಲ್ಲಿಸಿರುವುದರಿಂದ ಮೊದಲು ಪಾಕಿಸ್ತಾನದ ಬೇಡಿಕೆ ಕುರಿತಂತೆ ಚರ್ಚೆಯಾಗುತ್ತದೆ. ಆಗ ಭಾರತದ ಅರ್ಜಿಯ ಚರ್ಚೆ ವಿಳಂಬವಾಗುತ್ತದೆ ಮತ್ತು ಅರ್ಜಿ ತಿರಸ್ಕೃತಗೊಳ್ಳುತ್ತದೆ ಎಂಬುದು ಚೀನಾ ಮತ್ತು ಪಾಕಿಸ್ತಾನ ದೇಶಗಳ ಕುತಂತ್ರ. ಒಂದು ವೇಳೆ ಚರ್ಚೆಯಲ್ಲಿ ಭಾರತದ ಪರವಾದ ನಿಲುವುಗಳು ಉದ್ಭವವಾದರೆ ಆಗ ಚೀನಾ ತನ್ನ ವೆಟೋ ಅಧಿಕಾರವನ್ನು ಬಳಕೆ ಮಾಡುವ ಮೂಲಕ ಭಾರತವನ್ನು ಎನ್ ಎಸ್ ಜಿ ಸಮೂಹದಿಂದ ದೂರ ವಿಡುತ್ತದೆ. ಇದು ಪಾಕಿಸ್ತಾನ ಮತ್ತು ಚೀನಾ ದೇಶಗಳ ಕುತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹಕ್ಕೆ ಭಾರತ ಸೇರ್ಪಡೆಯಾಗುವುದನ್ನು ತಪ್ಪಿಸಲು ಬೇಕಾದ ಎಲ್ಲ ರೀತಿಯ ಕಾರ್ಯಗಳನ್ನು ಚೀನಾ ಮತ್ತು ಪಾಕಿಸ್ತಾನ ದೇಶಗಳು ಜಂಟಿಯಾಗಿ ಮಾಡುತ್ತಿವೆ.
Advertisement