ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಸ್ಸಾಂನಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಬಲಿ ಕೊಟ್ಟ ಮಂತ್ರವಾದಿ

ಮಂತ್ರವಾದಿಯೊಬ್ಬನ ಮೂಢನಂಬಿಕೆ ಮತ್ತು ಮಾಟ ಮಂತ್ರಕ್ಕೆ ಅಸ್ಸಾಂನ ನಾಲ್ಕು ವರ್ಷದ ಬಾಲಕಿಯೊಬ್ಬಳು ಆಹುತಿಯಾದ ಆಘಾತಕಾರಿ ಘಟನೆ ವರದಿಯಾಗಿದೆ.
ಸೋನಾರಿ: ಮಂತ್ರವಾದಿಯೊಬ್ಬನ ಮೂಢನಂಬಿಕೆ ಮತ್ತು ಮಾಟ ಮಂತ್ರಕ್ಕೆ ಅಸ್ಸಾಂನ ನಾಲ್ಕು ವರ್ಷದ ಬಾಲಕಿಯೊಬ್ಬಳು ಆಹುತಿಯಾದ ಆಘಾತಕಾರಿ ಘಟನೆ ವರದಿಯಾಗಿದೆ. 
ಆಹುತಿಯಾದ ಬಾಲಕಿ ಆದಿವಾಸಿ ಜನಾಂಗಕ್ಕೆ ಸೇರಿದ್ದಳು ಎಂದು ತಿಳಿದುಬಂದಿದೆ. 
ಪೊಲೀಸರು ರುಂಡ ಕತ್ತರಿಸಿದ ಮಗುವಿನ ದೇಹವನ್ನು ಪತ್ತೆ ಹಚ್ಚಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. 
ಮಗು ಕಾಣೆಯಾದ ಅಕ್ಟೋಬರ್ 22 ರಂದು ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈಮಧ್ಯೆ ಮಂತ್ರವಾದಿಯ ಮನೆಯನ್ನು ಕುಪಿತ ಗ್ರಾಮವಾಸಿಗಳು ಧ್ವಂಸಗೊಳಿಸಿದ್ದಾರೆ. ಮೂಲಗಳ ಪ್ರಕಾರ ಮುಖ್ಯ ಆರೋಪಿ ಅಬ್ದುಲ್ ಜಲೀಲ್ ಕಾಣೆಯಾಗಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com