ಒಂದು ದಿನದ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಎನ್ ಡಿ ಟಿ ವಿ

ಕೇಂದ್ರ ಸರ್ಕಾರ ಹಿಂದಿ ಸುದ್ದಿ ವಾಹಿನಿ ಎನ್ ಡಿ ಟಿ ವಿ ವಿರುದ್ಧ ಹೇರಿರುವ ಒಂದು ದಿನದ ನಿಷೇಧವನ್ನು ಪ್ರಶ್ನಿಸಿ ಎನ್ ಡಿ ಟಿ ವಿ ಮಾಧ್ಯಮ ಸಂಸ್ಥೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಕೇಂದ್ರ ಸರ್ಕಾರ ಹಿಂದಿ ಸುದ್ದಿ ವಾಹಿನಿ ಎನ್ ಡಿ ಟಿ ವಿ ವಿರುದ್ಧ ಹೇರಿರುವ ಒಂದು ದಿನದ ನಿಷೇಧವನ್ನು ಪ್ರಶ್ನಿಸಿ ಎನ್ ಡಿ ಟಿ ವಿ ಮಾಧ್ಯಮ ಸಂಸ್ಥೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದೆ. 
"ಹಿಂದಿ ಸುದ್ದಿವಾಹಿನಿಯ ವಿರುದ್ಧ ಕೇಂದ್ರದ ಒಂದು ದಿನದ ನಿಷೇಧವನ್ನು ಸುಪ್ರೀಂ ಕೋರ್ಟ್ ನಲ್ಲಿ ಎನ್ ಡಿ ಟಿ ವಿ ಪ್ರಶ್ನಿಸಿದೆ" ಎಂದು ಹೇಳಿಕೆಯಲ್ಲಿ ಸುದ್ದಿವಾಹಿನಿ ತಿಳಿಸಿದೆ. 
ಜನವರಿ 2 ರಂದು ಪಠಾಣ್ ಕೋಟ್ ಭಾರತೀಯ ವಾಯು ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಪ್ರಸಾರ ಮಾಡುವಾಗ ಕೇಬಲ್ ಆಕ್ಟ್ ನಿಯಮಗಳನ್ನು ಉಲ್ಲಂಘಿಸಿದೆ ಎಂದು ದೂರಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನವೆಂಬರ್ 8 ಮಧ್ರಾತ್ರಿಯಿಂದ ನವೆಂಬರ್ 9 ಮಧ್ಯರಾತ್ರಿಯವರೆಗೆ ಎನ್ ಡಿ ಟಿ ವಿ ಹಿಂದಿ ಸುದ್ದಿವಾಹಿನಿಯ ಮೇಲೆ ನಿಷೇಧ ಹೇರಿ ಕಳೆದ ಗುರುವಾರ ಆದೇಶ ಹೊರಡಿಸಿತ್ತು. 
ಈ ಆರೋಪಗಳನ್ನು ಅಲ್ಲಗೆಳೆದಿರುವ ಎನ್ ಡಿ ಟಿ ವಿ "ಇತರ ಸುದ್ದಿವಾಹಿನಿಗಳು ಮತ್ತು ದಿನಪತ್ರಿಕೆಗಳು ಕೂಡ ಅದೇ ಸುದ್ದಿಯನ್ನು ಬಿತ್ತರಿಸಿವೆ" ಎಂದು ತಿಳಿಸಿದೆ.
ಈ ನಿಷೇಧಕ್ಕೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com