ಆಮ್ ಆದ್ಮಿ ಪಕ್ಷ ಸೇರಿದ ಬಿಜೆಪಿ ಸಂಸದ ಕೀರ್ತಿ ಆಜಾದ್ ಪತ್ನಿ

ಉಚ್ಛಾಟನೆಗೊಂಡಿರುವ ಬಿಜೆಪಿ ಮುಖಂಡ ಮತ್ತು ಸಂಸದ ಕೀರ್ತಿ ಆಜಾದ್ ಆವರ ಪತ್ನಿ ಪೂನಂ ಆಜಾದ್ ನವೆಂಬರ್ 13 ರಂದು ಆಮ್ ಆದ್ಮಿ ಪಕ್ಷ ಸೇರಲಿದ್ದಾರೆ.
ಎಎಪಿ ಪಕ್ಷದ ಚಿಹ್ನೆ
ಎಎಪಿ ಪಕ್ಷದ ಚಿಹ್ನೆ
ನವದೆಹಲಿ: ಉಚ್ಛಾಟನೆಗೊಂಡಿರುವ ಬಿಜೆಪಿ ಮುಖಂಡ ಮತ್ತು ಸಂಸದ ಕೀರ್ತಿ ಆಜಾದ್ ಆವರ ಪತ್ನಿ ಪೂನಂ ಆಜಾದ್ ನವೆಂಬರ್ 13 ರಂದು ಆಮ್ ಆದ್ಮಿ ಪಕ್ಷ ಸೇರಲಿದ್ದಾರೆ. 
"ಪೂನಂ ಆಜಾದ್ ಅಧಿಕೃತವಾಗಿ ನವೆಂಬರ್ 13 ಕ್ಕೆ ಎಎಪಿ ಸೇರಲಿದ್ದಾರೆ" ಎಂದು ಎಎಪಿ ಮುಖಂಡ ಸಂಜಯ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ. 
2003 ರ ವಿಧಾನಸಭಾ ಚುನಾವಣೆಯಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿದ್ದ ಪೂನಂ ಆಜಾದ್ ಸದ್ಯಕ್ಕೆ ದೆಹಲಿ ಬಿಜೆಪಿಯ ವಕ್ತಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. 
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಪೂನಂ ಆಜಾದ್, ಎಎಪಿ ಪಕ್ಷ ಸೇರಿದ ಮೇಲಷ್ಟೇ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.
ಬಿಹಾರದ ದರಭಂಗಾದಲ್ಲಿ ಬಿಜೆಪಿ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಕೀರ್ತಿ ಆಜಾದ್, ಬಿಜೆಪಿ ಮುಖಂಡ ಅರುಣ್ ಜೇಟ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯನ್ನು ಮುನ್ನಡೆಸುವಾಗ ಅವ್ಯವಹಾರಗಳು ನಡೆದಿದ್ದವು ಎಂದು ದೂರಿದ್ದಕ್ಕೆ ಅವರನ್ನು  ಪಕ್ಷದಿಂದ ವಜಾ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com