ಶೇ.74 ರಷ್ಟು ಸರ್ಕಾರಿ ಶಾಲೆ ಮಕ್ಕಳಿಗೆ ಓದಲು ಬರುವುದಿಲ್ಲ

ದೆಹಲಿಯ ಸರ್ಕಾರಿ ಶಾಲೆಯ ಶೇ.74 ರಷ್ಟು ಮಕ್ಕಳಿಗೆ ಓದಲು ಬರುವುದಿಲ್ಲ ಎಂಗು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಯ ಶೇ.74 ರಷ್ಟು ಮಕ್ಕಳಿಗೆ ಓದಲು ಬರುವುದಿಲ್ಲ ಎಂಗು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ಅವರದ್ದೇ ಪಠ್ಯ ಪುಸ್ತಕ ಓದಲು ಸಾಧ್ಯವಾಗತ್ತಿಲ್ಲ. ಹೀಗಾಗಿ ಶಿಕ್ಷಕರು ಇದನ್ನು ಸವಾಲಾಗಿ ಸ್ವೀಕರಿಸಿ ಆ ಮಕ್ಕಳಿಗೆ ಉತ್ತಮ ತರಬೇತಿ ನೀಡಬೇಕು ಎಂದು ಅವರು ಹೇಳಿದ್ದಾರೆ.

ನಮ್ಮ ಮಕ್ಕಳಿಗೆ ಓದುವುದನ್ನು ಕಲಿಸಿ, ಉತ್ತಮ ಜ್ಞಾನ ನೀಡಿ, ಭವಿಷ್ಯದಲ್ಲಿ ಎದುರಾಗುವ ಸವಾಲಗಳನ್ನು ಎದುರಿಸಲು ಅವರನ್ನು ತಯಾರು ಮಾಡಬೇಕು ಎಂದು ಮನೀಶ್ ಸಿಸೋಡಿಯಾ ಶಿಕ್ಷಕರಿಗೆ ಸಲಹೆ ನೀಡಿದ್ದಾರೆ.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆ ಆವರಣ ಬಿಟ್ಟ ನಂತರ, ಹೊರಗಿನ ಪ್ರಪಂಚದಲ್ಲಿ ಜೀವನ ತುಂಬಾ ಕಷ್ಟವಿದೆ. ಎಲ್ಲೆಲ್ಲೂ ಜಾತೀಯತೆ ತಾಂಡವವಾಡುತ್ತಿದೆ. ಜಾತೀಯತೆ ವಿರುದ್ಧ ಎಲ್ಲರೂ ಹೋರಾಡಬೇಕಿದೆ. ಹಿಂದೂಗಳು ಮತ್ತು ಮುಸ್ಲಿಮರು ನಿರಂತರ ಕಿತ್ತಾಡುತ್ತಲೇ ಇರುತ್ತಾರೆ,. ಹೀಗಾಗಿ ನಮ್ಮ ಮಕ್ಕಳು ಜಾತೀಯತೆ ವಿರುದ್ಧ ಹೋರಾಡುವಂತೆ ತಯಾರು ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ,

ನಾವು ಬುದ್ಧಿವಂತ ಡಾಕ್ಟರ್ ಮತ್ತು ಎಂಜಿನೀಯರ್ ಗಳನ್ನು ತಯಾರು ಮಾಡುತ್ತಿದ್ದೇವೆ, ಆದರೆ ಉತ್ತಮ ಮಾನವೀಯ ಮೌಲ್ಯಗಳನ್ನಲ್ಲ ಎಂದು ಅವರು ವಿಷಾಧ ವ್ಯಕ್ತ ಪಡಿಸಿದರು.ದೊಡ್ಡ ದೊಡ್ಡ ಸಂಸ್ಥೆಗಳ ವಿದ್ಯಾರ್ಥಿಗಳು ಹೊಸತಾಗಿ ಏನನ್ನೂ ಮಾಡಲು ಪ್ರಯತ್ನಿಸುವುದಿಲ್ಲ. ಅವರು ಯಾವಾಗಲು ಕಂಫರ್ಟ್ ಝೋನ್ ಬಿಟ್ಟು ಹೊರ ಬರಲು ಇಚ್ಚಿಸುವುದಿಲ್ಲ ಎಂದು ಸಿಸೋಡಿಯಾ ಬೇಸರ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com