ತೆಲಂಗಾಣದಲ್ಲಿ ಭಾರಿ ಮಳೆ, ಸಿಎಂ ತವರು ಜಿಲ್ಲೆ ಮೇದಕ್ ನಲ್ಲಿ ಮೂವರು ಸಾವು

ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ತೀರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಹೈದರಾಬಾದ್ ಸೇರಿದಂತೆ...
ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದ ಲಾರಿ
ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದ ಲಾರಿ
Updated on: 
ಹೈದರಾಬಾದ್: ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ತೀರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಹೈದರಾಬಾದ್ ಸೇರಿದಂತೆ ತೆಲಂಗಾಣಾದ್ಯಂತ ಕಳೆದ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಮಳೆ ಸಂಬಂಧಿ ಘಟನೆಗಳಿಂದಾಗಿ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನವೇ ಆರು ಮಂದಿ ಮೃತಪಟ್ಟಿದ್ದು, ಇಂದು ಮತ್ತೆ ಮೂವರು ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ತವರು ಜಿಲ್ಲೆ ಮೇದಕ್ ನಲ್ಲಿ ಮೃತಪಟ್ಟಿದ್ದಾರೆ.
ಮೇದಕ್ ಜಿಲ್ಲೆಯ ಅನಂತ್ ಸಾಗರ ಗ್ರಾಮದಲ್ಲಿ ಓರ್ವ ಯುವಕ ಮಂಜೀರ ನದಿಯಲ್ಲಿ ಕೊಚ್ಚಿ ಹೋಗಿದ್ದು, ಇದೇ ಜಿಲ್ಲೆಯ ಸೈದಾಪೇಟ್ ನಲ್ಲಿ ಮತ್ತಿಬ್ಬರು ಕಟ್ಟಣ ಕುಸಿದುಬಿದ್ದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನಿಷ್ಠ 23 ಕಾರ್ಮಿಕರು ಸೇತುವೆ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಮಂಜೀರ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಅವರು ದ್ವೀಪವೊಂದರಲ್ಲಿ ರಕ್ಷಣೆ ಪಡೆದಿದ್ದಾರೆ ಎನ್ನಲಾಗಿದೆ. 
ಮತ್ತೊಂದು ಘಟನೆಯಲ್ಲಿ ಜಹೀರಾಬಾದ್ ನಿಂದ ನಾರಾಯಣಖೇಡ್ ಗೆ ತೆರಳುತ್ತಿದ್ದ ಲಾರಿಯೊಂದು ಮಂಜೀರ ನದಿಯ ಸೇತುವೆಯ ತಡೆಗೋಡೆ ಡಿಕ್ಕಿ ಹೊಡೆದಿದೆ. ಭಾರಿ ಮಳೆಯಿಂದಾಗಿ ದಾರಿ ಕಾಣದೆ ಚಾಲಕ ತಡೆಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com