ಉಭಯ ರಾಜ್ಯಗಳೊಂದಿಗೆ ಇಂದು ದೆಹಲಿಯ ಶ್ರಮಶಕ್ತಿ ಭವನದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉಮಾ ಭಾರತಿ, ನೀರಿನ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುವುದು ಬೇಡ. ಎರಡು ರಾಜ್ಯಗಳು ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಯಾವುದೇ ರಾಜ್ಯದಲ್ಲಿ ಅಹಿತಕರ ಘಟನೆ ನಡೆಯಬಾರದು. ಒಂದು ವೇಳೆ ಗಲಾಟೆ, ಹಿಂಸಾಚಾರ ನಡೆದರೆ ನಾನು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಸಿದರು. ಆದರೆ ಇದು ಬೆದರಿಕೆಯಲ್ಲಿ ಮನವಿ ಅಷ್ಟೆ ಎಂದು ನಂತರ ಸ್ಪಷ್ಟಪಡಿಸಿದರು.