ಕಾವೇರಿ ವಿವಾದ
ಗೋದಾವರಿ-ಕಾವೇರಿ ನದಿ ಜೋಡಣೆಯಿಂದ ಶೀಘ್ರ ಕಾವೇರಿ ವಿವಾದ ಅಂತ್ಯ? ದಕ್ಷಿಣ ಭಾರತದ ನೀರಿನ ಕಲಹಕ್ಕೆ ಚಂದ್ರಬಾಬು ನಾಯ್ಡು ಹೊಸ ಸೂತ್ರ!
ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆಯ ಮೂಲಕ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವಿನ ನೀರಿನ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಪ್ರತಿಪಾದಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?"; ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!
ಈ ವರ್ಷ ರಾಜ್ಯಕ್ಕೆ ಸಾಕಷ್ಟು ಸಂಕಷ್ಟ ಎದುರಾಗಿದ್ದು, ಹಲವು ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ನಾವು ನೀರನ್ನು ಸಂರಕ್ಷಿಸಬೇಕಿದೆ.

ಕಾವೇರಿ ವಿವಾದ: ತಮಿಳುನಾಡಿಗೆ 4,000 ದಿಂದ 2,000 ಕ್ಯೂಸೆಕ್‌ಗಳಿಗೆ ಇಳಿಸುವಂತೆ ಕರ್ನಾಟಕದ ಮನವಿ-ಚಲುವರಾಯಸ್ವಾಮಿ
ರಾಜ್ಯವು ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಸಚಿವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಸಂದರ್ಭದಲ್ಲಿ, ಸೆಪ್ಟೆಂಬರ್ 24ರ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡುವುದು ರಾಜ್ಯಕ್ಕೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಕಾವೇರಿ ಕದನ: 20 TMC ನೀರಿಗೆ ತಮಿಳುನಾಡು ಪಟ್ಟು; ಬರ ಪರಿಸ್ಥಿತಿ ಮುಂದಿಟ್ಟ ಕರ್ನಾಟಕ..!
ತಮಿಳುನಾಡು ತನ್ನ ಪಾಲಿನ ನೀರಿನಲ್ಲಿ 20 ಟಿಎಂಸಿ ಕೊರತೆಯಾಗಿದೆ ಎಂದು ಆರೋಪಿಸಿ, ಬೆಳೆ ನಷ್ಟದ ವಿಚಾರವನ್ನು ಮುಂದಿಟ್ಟರೆ, ಕರ್ನಾಟಕವು ತನ್ನ ಜಲಾನಯನ ಪ್ರದೇಶದಲ್ಲೇ ಬರ ಪರಿಸ್ಥಿತಿ ಇದೆ ಎಂದು ಸಮರ್ಥಿಸಿಕೊಂಡಿದೆ.

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA
ಇಂದು ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ಕಾವೇರಿ ನೀರಾವರಿ ನಿಗಮ ಎಂಡಿ ಮಹೇಶ್ ಅವರು ಭಾಗಿಯಾದ್ದಾರೆ.

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್ 31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
ದುರದೃಷ್ಟವಶಾತ್, ಕರ್ನಾಟಕವು ತಮಿಳುನಾಡಿಗೆ ಪ್ರಮಾಣಾನುಗುಣವಾಗಿ ನೀರು ಹರಿಸುತ್ತಿಲ್ಲ. ಅಲ್ಪ ಪ್ರಮಾಣದ ನೀರು ಮಾತ್ರ ಬಿಡುಗಡೆಯಾಗುತ್ತಿದ್ದು, ತಮಿಳುನಾಡಿಗೆ ಬರಬೇಕಾದಷ್ಟು ನೀರು ಸಿಗುತ್ತಿಲ್ಲ.

ಕಾವೇರಿ ನೀರು ವಿವಾದ: ಸರ್ಕಾರಕ್ಕೆ ಎಲ್ಲವೂ ಗೊತ್ತಿದೆ, ನಾವು ರೈತರ ವಿರುದ್ಧವಲ್ಲ- ಸಚಿವ ಚಲುವರಾಯಸ್ವಾಮಿ
ಮಂಡ್ಯ ಹಾಗೂ ಕಾವೇರಿ ಜಲಾನಯನ ಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿರುವುದು ನನಗೆ ಗೊತ್ತಿದೆ. ಆದರೆ, ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕಾಗಿ ಕಾಯಬೇಕಾಗಿದೆ. ನಾವು ರೈತರ ವಿರುದ್ಧವಲ್ಲ. ಮಂಡ್ಯ ಸೇರಿದಂತೆ ಇತರ ಭಾಗಗಳ ರೈತರ ಸಮಸ್ಯೆಗಳು ನಮಗೆ ತಿಳಿದಿವೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ: ಸುಪ್ರೀಂ ಕೋರ್ಟ್ ವಿಚಾರಣೆವರೆಗೆ ಯಥಾಸ್ಥಿತಿ ಮುಂದುವರಿಕೆ..!
ನೀರು ಬಿಡುಗಡೆ ಪ್ರಮಾಣವನ್ನು ಮರುಪರಿಶೀಲಿಸುವಂತೆ CWMAಗೆ ಮನವಿ ಸಲ್ಲಿಸಲು ನಾವು ಸಿದ್ಧರಾಗಿದ್ದೆವು. ಅವರು ಇಂದು ಅರ್ಜಿಯನ್ನು ವಿಲೇವಾರಿ ಮಾಡುತ್ತಿದ್ದಾರೆ. ಅದು ವಿಲೇವಾರಿಯಾದ ಬಳಿಕ ಮತ್ತೆ ಅವರನ್ನೇ ಸಂಪರ್ಕಿಸುತ್ತೇವೆ.

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ; CWMA ಆದೇಶ ಪಾಲಿಸಲು ಸೂಚನೆ..!
ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, CWMA ಆದೇಶದಂತೆ ಕರ್ನಾಟಕ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

