ಆಮ್ ಆದ್ಮಿ ಪಕ್ಷ ಸೇರಿದ ಐದು ತಿಂಗಳ ಬಳಿಕ, ಬಿಜೆಪಿಯಿಂದ ಉಚ್ಚಾಟಿತನಾದ ಬಿಜೆಪಿ ಸಂಸದ ಕೀರ್ತಿ ಆಜಾದ್ ಝಾ ಅವರ ಪತ್ನಿ ಪೂನಂ ಆಜಾದ್ ಝಾ ಪಕ್ಷ ಬದಲಿಸಿ ಮಂಗಳವಾರ ಕಾಂಗ್ರೆಸ್ ಸೇರಿದ್ದಾರೆ.
ನವದೆಹಲಿ: ಆಮ್ ಆದ್ಮಿ ಪಕ್ಷ ಸೇರಿದ ಐದು ತಿಂಗಳ ಬಳಿಕ, ಬಿಜೆಪಿಯಿಂದ ಉಚ್ಚಾಟಿತನಾದ ಬಿಜೆಪಿ ಸಂಸದ ಕೀರ್ತಿ ಆಜಾದ್ ಝಾ ಅವರ ಪತ್ನಿ ಪೂನಂ ಆಜಾದ್ ಝಾ ಪಕ್ಷ ಬದಲಿಸಿ ಮಂಗಳವಾರ ಕಾಂಗ್ರೆಸ್ ಸೇರಿದ್ದಾರೆ.
ಝಾ ಜೊತೆಗೆ ಪತ್ರಿಕಾ ಗೋಷ್ಠಿ ನಡೆಸಿದ ದೆಹಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಜಯ್ ಮಾಕೆನ್ ಈ ವಿಷಯ ಘೋಷಿಸಿದ್ದಾರೆ.
"ಅವರು ಎಎಪಿಯಿಂದ ತಮ್ಮ ಗೆಳೆಯರೊಂದಿಗೆ ಬಂದಿದ್ದಾರೆ ಮತ್ತು ನಾವು ಅವರಿಗೆ ಹೊಸ ಜವಾಬ್ದಾರಿ ನೀಡಿದ್ದೇವೆ" ಎಂದು ಮಾಕೆನ್ ಹೇಳಿದ್ದಾರೆ.
"ನಾವು ಪೂರ್ವಾಂಚಲ ಮತ್ತು ಮಿಥಿಲಾಂಚಲ ಬಗ್ಗೆ ಧ್ವನಿ ಎತ್ತಲಿದ್ದೇವೆ ಎಂದು ಅವರಿಗೆ ಧೃಢೀಕರಿಸುತ್ತೇವೆ" ಎಂದು ಕೂಡ ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.
ಝಾ ನವೆಂಬರ್ ನಲ್ಲಿ ಬಿಜೆಪಿ ತೊರೆದು ಎಎಪಿ ಸೇರಿದ್ದರು. ಬಿಜೆಪಿ ವಕ್ತಾರರಾಗಿ ಸುಧೀರ್ಘ ಪಯಣ ನಡೆಸಿದ್ದ ಝಾ ದೆಹಲಿ ಬಿಜೆಪಿ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.