ಗಾಂಧಿ ಸ್ಮೃತಿ ಯಾತ್ರೆ ಪ್ರಾರಂಭಿಸಿದ ನಿತೀಶ್ ಕುಮಾರ್

ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಮಹಾತ್ಮ ಗಾಂಧಿಯವರ ಮೊದಲ ಪ್ರಮುಖ ಸತ್ಯಾಗ್ರಹದ ೧೦೦ನೇ ಜಯಂತಿಯ ನೆನಪಿನ ಅಂಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಚಂಪರಣ್ ಜಿಲ್ಲೆಯಿಂದ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
Updated on: 
ಪಾಟ್ನಾ: ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಮಹಾತ್ಮ ಗಾಂಧಿಯವರ ಮೊದಲ ಪ್ರಮುಖ ಸತ್ಯಾಗ್ರಹದ ೧೦೦ನೇ ಜಯಂತಿಯ ನೆನಪಿನ ಅಂಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಚಂಪರಣ್ ಜಿಲ್ಲೆಯಿಂದ ಮಂಗಳವಾರ 'ಗಾಂಧಿ ಸ್ಮೃತಿ ಯಾತ್ರೆ' ಪ್ರಾರಂಭಿಸಿದ್ದಾರೆ. 
"ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊನ್ನಡಗೂಡಿ, ಇತರ ಸಚಿವರು ಮತ್ತು ನಾಗರಿಕರೊಂದಿಗೆ ಚಂದ್ರಿಯ ಗ್ರಾಮದಿಂದ ಮೋತಿಹಾರಿ (ಪೂರ್ವ ಚಂಪರಣ್ ಜಿಲ್ಲಾ ಕೇಂದ್ರ) ವರೆಗೆ ಏಳು ಕಿಲೋಮೀಟರ್ ಪಾದಯಾತ್ರೆ ಪ್ರಾರಂಭಿಸಿದ್ದಾರೆ" ಎಂದು ಜಿಲ್ಲಾ ಅಧಿಕಾರಿ ಹೇಳಿದ್ದಾರೆ. 
ಈ ಯಾತ್ರೆಯ ನಂತರ ಸರಣಿ ಕಾರ್ಯಕ್ರಮಗಳನ್ನು ನಿಯೋಜಿಸಲಾಗಿದೆ ಎಂದು ಕೂಡ ಅಧಿಕಾರಿ ಹೇಳಿದ್ದಾರೆ. ಈ ಶತಮಾನೋತ್ಸವ ಆಚರಣೆಗಾಗಿ ಕಳೆದ ವಾರದಿಂದಲೇ ಹಲವು ಕಾರ್ಯಕ್ರಮಗಳು ಪ್ರಾರಂಭವಾಗಿವೆ. 
ಚಂಪರಣ್ ಸತ್ಯಾಗ್ರಹದ ಶನಮಾನೋತ್ಸವ ಭಾಗವಾಗಿ ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರದ ವಿವಿಧ ಪ್ರದೇಶಗಳ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಿಸಿದ್ದರು. 
ಬ್ರಿಟಿಷ್ ಅಧಿಪತ್ಯದ ವಿರುದ್ಧ ಏಪ್ರಿಲ್ ೧೦, ೧೯೧೭ ರಲ್ಲಿ ಈ ಅಹಿಂಸಾ ಚಳುವಳಿಯನ್ನು ಮಹಾತ್ಮ ಗಾಂಧಿ ಪ್ರಾರಂಭಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com