ಪ್ರಧಾನ ಸುದ್ದಿ

ವಿಪಕ್ಷ ನಾಯಕರಿಲ್ಲದೇ ಲೋಕಪಾಲ್ ನೇಮಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ!

ವಿಪಕ್ಷ ನಾಯಕರಿಲ್ಲದೇ ಲೋಕಪಾಲ್ ನೇಮಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ!
ಸಂಗ್ರಹ ಚಿತ್ರ
Published On :

ನವದೆಹಲಿ: ಭ್ರಷ್ಟಾಚಾರ ತಡೆಗಾಗಿ ಮಾಡಲಾಗುವ ಲೋಕಪಾಲ್‌ ನೇಮಕಾತಿ ಪ್ರಕ್ರಿಯೆ ವಿಪಕ್ಷ ನಾಯಕ ಇಲ್ಲ ಎಂಬ ಒಂದೇ ಕಾರಣಕ್ಕೆ ವಿಳಂಬಗೊಳಿಸುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಹೇಳಿದೆ.

ವಿಪಕ್ಷ ನಾಯಕನಿಲ್ಲ ಎಂಬ ಒಂದೇ ಕಾರಣದಿಂದ ಲೋಕಪಾಲ್ ನೇಮಕ ವಿಳಂಬ ಮಾಡುತ್ತಿರುವುದು ಸರಿಯಲ್ಲ, ವಿಪಕ್ಷ ನಾಯಕನಿಲ್ಲದೆಯೂ ಲೋಕಪಾಲ ನೇಮಕಾತಿ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಕೇಂದ್ರ  ಸರ್ಕಾರಕ್ಕೆ ಹೇಳಿದೆ.

ಮುಖ್ಯ ಪ್ರತಿಪಕ್ಷ ಕಾಂಗ್ರೆಸ್ ಅನ್ನು ಗಣನೆಗೆ ತೆಗೆದುಕೊಳ್ಳದೆಯೂ ಇದೀಗ ಲೋಕಪಾಲರನ್ನು ಕೇಂದ್ರ ಸರ್ಕಾರ ನೇಮಿಸಬಹುದು. ಪ್ರತಿಪಕ್ಷ ನಾಯಕರ ಭಾಗಿತ್ವವಿಲ್ಲದೇ ಲೋಕಪಾಲ್ ರನ್ನು ನೇಮಿಸಬಹುದು. ಪ್ರತಿಪಕ್ಷ  ನಾಯಕನಿಲ್ಲ ಹೀಗಾಗಿ ನೇಮಕಾತಿ ವಿಳಂಬ ಎಂಬ ಕೇಂದ್ರ ಸರ್ಕಾರದ ವಾದವನ್ನು ಒಪ್ಪಲು ಸಾಧ್ಯವಿಲ್ಲ . ಲೋಕಪಾಲ್ ನೇಮಕಕ್ಕೆ ಈಗಾಗಲೇ ಮೂರು ವರ್ಷಗಳು ವಿಳಂಬವಾಗಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.