ಫೆಬ್ರವರಿ 18ರಂದು ವಿಧಾನಸಭೆಯಲ್ಲಿ ಪಳನಿಸ್ವಾಮಿ ಅವರು ಅಕ್ರಮವಾಗಿ ವಿಶ್ವಾಸ ಮತ ಗೆದ್ದಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಡಿಎಂಕೆ ಆರೋಪಿಸಿದೆ. ಡಿಎಂಕೆ ಶಾಸಕರನ್ನು ಬಲವಂತವಾಗಿ ಸದನದಿಂದ ಹೊರಗಿಟ್ಟು ವಿಶ್ವಾಸಮತಕ್ಕೆ ಅವಕಾಶ ನೀಡಿದ್ದು ಕಾನೂನು ಬಾಹಿರ ಮತ್ತು ಸದನದ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.