ಕರಾಚಿ ಬಂದರಿನಲ್ಲಿ ಲಂಗರು ಹಾಕಿದ್ದ ಚೀನಾ ಸಬ್'ಮೆರಿನ್!

ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ಚೀನಾ ದೇಶ ತನ್ನ ಅತ್ಯಾಧುನಿಕ ಅಣ್ವಸ್ತ್ರ ಜಲಾಂತರ್ಗಾಮಿಯನ್ನು ನಿಲ್ಲಿಸುವ ಮೂಲಕ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಗೂಗಲ್ ಬಿಡುಗಡೆ ಮಾಡಿರುವ ಶಾಂಗ್ ಸಬ್ ಮೆರಿನ್ ಚಿತ್ರ
ಗೂಗಲ್ ಬಿಡುಗಡೆ ಮಾಡಿರುವ ಶಾಂಗ್ ಸಬ್ ಮೆರಿನ್ ಚಿತ್ರ

ನವದೆಹಲಿ: ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ಚೀನಾ ದೇಶ ತನ್ನ ಅತ್ಯಾಧುನಿಕ ಅಣ್ವಸ್ತ್ರ ಜಲಾಂತರ್ಗಾಮಿಯನ್ನು ನಿಲ್ಲಿಸುವ ಮೂಲಕ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಖ್ಯಾತ ಸರ್ಚ್ ಎಂಜಿನ್ ಗೂಗಲ್ ನ ಅತ್ಯಾಧುನಿಕ ಸ್ಯಾಟೆಲೈಟ್  ಕರಾಚಿ ಬಂದರಿನಲ್ಲಿ ಚೀನಾದ 2 ಶಾಂಗ್ ಸಬ್ ಮೆರಿನ್ ಗಳು ಲಂಗರು ಹಾಕಿರುವ ಚಿತ್ರಗಳನ್ನು ಸೆರೆ ಹಿಡಿದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ಸ್ಯಾಟೆಲೈಟ್ ಇಮೇಜ್ ತಜ್ಞರು ಟ್ವಿಟರ್​ನಲ್ಲಿ ಈ ಫೋಟೊ ಪ್ರಕಟಿಸಿದ್ದು, ಗೂಗಲ್​ ಅರ್ಥ್​ನಿಂದ ಚಿತ್ರವನ್ನು ಕ್ಲಿಕ್ಕಿಸಿದ್ದಾಗಿ ಹೇಳಿಕೊಂಡಿದ್ದಾರೆ. ಚೀನಾ ನಿರ್ವಿುತ 2 ಶಾಂಗ್ ಸಬ್​ವೆುರೀನ್​ಗಳನ್ನು ಕರಾಚಿಯಲ್ಲಿ ನಿಯೋಜಿಸಲಾಗಿತ್ತು.  ಭಾರತೀಯ ನೌಕಾಪಡೆ, ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಕಲೆಹಾಕಲು ಚೀನಾ-ಪಾಕಿಸ್ತಾನ ಜಂಟಿಯಾಗಿ ಗೂಢಚಾರಿಕೆ ನಡೆಸಿರುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಮೇ  ತಿಂಗಳಿನಲ್ಲೇ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳು ಪರಸ್ಪರ ಕೈ ಜೋಡಿಸಿ ಭಾರತದ ಮೇಲೆ ಗೂಢಚಾರಿಕೆ ನಡೆಸುವ ಉದ್ದೇಶದಿಂದ ಈ ಸಬ್ ಮೆರಿನ್ ಅನ್ನು ಕರಾಚಿಯಲ್ಲಿ ಲಂಗರು ಹಾಕಿಸಲಾಗಿತ್ತು ಎಂಬ ವಾದ ಕೂಡ  ಕೇಳಿಬರುತ್ತಿದೆ.

ಮತ್ತೊಂದು ವಾದದ ಪ್ರಕಾರ ಭಾರತದಲ್ಲಿರುವ ಅತ್ಯಾಧುನಿಕ ಸಬ್ ಮೆರಿನ್ ಗಳ ಮಾಹಿತಿ ಪಡೆಯುವ ಸಲುವಾಗಿ ಚೀನಾದ ಶಾಂಗ್ ಜಲಾಂತರ್ಗಾಮಿ ಕರಾಚಿಯಲ್ಲಿ ಲಂಗರು ಹಾಕಿತ್ತು ಎಂದು ಹೇಳಲಾಗುತ್ತಿದೆ. ಇದು ಭಾರತೀಯ  ಭದ್ರತಾ ಅಧಿಕಾರಿಗಳ ಆಂತಕಕ್ಕೆ ಕಾರಣವಾಗಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಭಾರತ, ಫ್ರಾನ್ಸ್ ದೇಶದ ಸಹಭಾಗಿತ್ವದಲ್ಲಿ ತಯಾರಾಗುತ್ತಿರುವ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಯ ಮಾಹಿತಿ ಸೋರಿಕೆಯಾಗಿತ್ತು. ಈ ಮಾಹಿತಿ  ಸೋರಿಕೆ ವಿಚಾರದಲ್ಲೂ ಚೀನಾದ ಹಸ್ತಕ್ಷೇಪವಿದೆ ಎಂದು ಹೇಳಲಾಗುತ್ತಿದೆ.

ಭಾರತದ ಅರುಣಾಚಲ ಪ್ರದೇಶ ಗಡಿಯ ಕುರಿತು ಆಗಾಗ ತಕರಾರು ತೆಗೆಯುವ ಚೀನಾದೇಶ ಭಾರತದ ಜಲಗಡಿ ಮೇಲೂ ಕಣ್ಣಿಟ್ಟಿದೆ. ಹಿಂದು ಮಹಾಸಾಗರದ ಮೇಲೆ ಹಿಡಿತ ಸಾಧಿಸಲು ಸಾಕಷ್ಟು ಯತ್ನವನ್ನೂ ನಡೆಸುತ್ತಿದೆ.  ಜಲಾಂತರ್ಗಾಮಿಗಳ ನಿಯೋಜನೆ ಇದರ ಒಂದು ಭಾಗವಾಗಿರುವ ಸಾಧ್ಯತೆಯಿದ್ದು, ಕಳೆದ ಕೆಲ ವರ್ಷಗಳಲ್ಲಿ ಚೀನಾದ ಯುದ್ಧ ಹಡಗು ಹಾಗೂ ಸಬ್​ ವೆುರೀನ್​ಗಳು ಹಲವು ಬಾರಿ ಹಿಂದು ಮಹಾಸಾಗರ ಪ್ರವೇಶಿಸಿರುವುದು ಬೆಳಕಿಗೆ  ಬಂದಿತ್ತು. 2016ರ ಮೇನಲ್ಲಿ ಕರಾಚಿಯಲ್ಲಿದ್ದ ಈ ಪರಮಾಣು ಚಾಲಿತ ಸಬ್​ವೆುರೀನ್​ಗಳು ಮಲಕ್ಕಾ ಜಲಸಂಧಿ ಮೂಲಕ ಚೀನಾಕ್ಕೆ ಮರಳಿದ್ದವು ಎಂದು ವಿಯೆಟ್ನಾಂ ಮಾಧ್ಯಮಗಳು ಜೂನ್​ ನಲ್ಲೇ ವರದಿ ಮಾಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com