ಭಾರತೀಯ ಯೋಧ ಚಂದು ಚೌಹ್ವಾಣ್ ಜೀವಂತವಾಗಿದ್ದಾನೆ: ಸುಭಾಷ್ ಭಮ್ರೆ

ನಾಪತ್ತೆಯಾಗಿರುವ ಭಾರತೀಯ ಯೋಧ ಚಂದು ಚೌಹ್ವಾಣ್ ಜೀವಂತವಾಗಿದ್ದು, ಆಕಸ್ಮಿರವಾಗಿ ಆತ ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಸೈನಿಕರಿಂದ ಬಂಧಿಯಾಗಿದ್ದಾನೆ ಎಂದು ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಷ್ ಭ್ರಮ್ರೆ ಹೇಳಿದ್ದಾರೆ.
ಯೋಧ ಚಂದು ಚೌಹ್ವಾಣ್-ಕೇಂದ್ರ ಸಚಿವ ಸುಭಾಷ್ ಭಮ್ರೆ
ಯೋಧ ಚಂದು ಚೌಹ್ವಾಣ್-ಕೇಂದ್ರ ಸಚಿವ ಸುಭಾಷ್ ಭಮ್ರೆ

ಮುಂಬೈ: ನಾಪತ್ತೆಯಾಗಿರುವ ಭಾರತೀಯ ಯೋಧ ಚಂದು ಚೌಹ್ವಾಣ್ ಜೀವಂತವಾಗಿದ್ದು, ಆಕಸ್ಮಿರವಾಗಿ ಆತ ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಸೈನಿಕರಿಂದ ಬಂಧಿಯಾಗಿದ್ದಾನೆ ಎಂದು ಕೇಂದ್ರ ರಕ್ಷಣಾ ಇಲಾಖೆಯ  ರಾಜ್ಯ ಸಚಿವ ಸುಭಾಷ್ ಭ್ರಮ್ರೆ ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಮುಂಬೈನ ಡಾಕ್ ಯಾರ್ಡ್ ನಲ್ಲಿ ನಡೆದ 2ನೇ ಸ್ಕಾರ್ಪೀನ್ ಶ್ರೇಣಿಯ ಜಲಾಂತರ್ಗಾಮಿ ಖಂಡೇರಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತೀಯ ಯೋಧ ಚಂದು ಚೌಹ್ವಾಣ್ ಪಾಕಿಸ್ತಾನ ಸೈನಿಕರ  ವಶದಲ್ಲಿದ್ದಾನೆ. ಆತ ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಗಡಿ ಪ್ರವೇಶಿಸಿದ್ದರಿಂದ ಪಾಕ್ ಸೈನಿಕರು ಆತನನ್ನು ಬಂಧಿಸಿದ್ದಾರೆ. ಇದೊಂದು ಪ್ರಮಾದ್ ವಶಾತ್ ಘಟನೆಯಾಗಿದ್ದು, ಯೋಧನ ಸುರಕ್ಷಿತ ಬಿಡುಗಡೆ  ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಚಂದು ಚೌಹ್ವಾಣ್ ವಿಚಾರವನ್ನು ಪಾಕಿಸ್ತಾನದ ಡಿಜಿಎಂಒ ಅಧಿಕಾರಿಗಳೊಂದಿಗೆ ಸುಮಾರ 15ರಿಂದ 20 ಬಾರಿ ಚರ್ಚಿಸಲಾಗಿದೆ. ಎರಡು ದಿನಗಳ ಹಿಂದೆಯೂ ಕೂಡ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗಿತ್ತು. ಅವರೂ ಕೂಡ  ಸಕಾರಾತ್ಮಕವಾಗಿ ಸ್ಪಂಧಿಸಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಯೋಧ ಚಂದು ಚೌಹ್ವಾಣ್ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಭಮ್ರೆ ಹೇಳಿದ್ದಾರೆ.

ಎಂಡಿಎಲ್ ನಿಂದ ದೇಶಕ್ಕೆ ಮತ್ತಷ್ಟು ಜಲಾಂತರ್ಗಾಮಿಗಳು: ಕೇಂದ್ರ ಸಚಿವರ ಮೆಚ್ಚುಗೆ
ಇದೇ ವೇಳೆ ಖಂಡೇರಿ ಜಲಾಂತರ್ಗಾಮಿ ನೌಕೆಯನ್ನು ನಿರ್ಮಾಣ ಮಾಡಿರುವ ಮಡಗಾಂವ್ ಡಾಕ್ ಲಿಮಿಟೆಡ್ ಸಂಸ್ಥೆ ಕುರಿತು ಮಾತನಾಡಿದ ಸುಭಾಷ್ ಭಮ್ರೆ ಅವರು, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಜಲಾಂತರ್ಗಾಮಿಗಳು  ಮಹತ್ತರ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಮಡಗಾಂವ್ ಡಾಕ್ ಲಿಮಿಟೆಡ್ ಸಂಸ್ಥೆಯ ಕಾರ್ಯ ನಿಜ್ಕಕೂ ಶ್ಲಾಘನೀಯ. ದೇಶಕ್ಕೆ ಪ್ರಬಲ ಜಲಾಂಕರ್ಗಾಮಿಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ದೇಶಕ್ಕಾಗಿ ಮತ್ತಷ್ಟು  ಜಲಾಂತರ್ಗಾಮಿಗಳು ತಯಾರಾಗುವ ವಿಶ್ವಾಸವಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com