ದೆಹಲಿಯಲ್ಲಿ ಬಿಎಂಡಬ್ಲ್ಯೂ ಗುದ್ದಿ ಟ್ಯಾಕ್ಸಿ ಚಾಲಕ ಸಾವು

ಅತಿ ವೇಗವಾಗಿ ನುಗ್ಗಿದ ಬಿಎಂಡಬ್ಲ್ಯೂ ಕಾರ್ ಟ್ಯಾಕ್ಸಿಯೊಂದಕ್ಕೆ ಗುದ್ದಿದ್ದರಿಂದ ಟ್ಯಾಕ್ಸಿ ಚಾಲಕ ಮೃತಪಟ್ಟಿದ್ದಾನೆ ಎಂದು ದೆಹಲಿ ಪೊಲೀಸರು ಸೋಮವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅತಿ ವೇಗವಾಗಿ ನುಗ್ಗಿದ ಬಿಎಂಡಬ್ಲ್ಯೂ ಕಾರ್ ಟ್ಯಾಕ್ಸಿಯೊಂದಕ್ಕೆ ಗುದ್ದಿದ್ದರಿಂದ ಟ್ಯಾಕ್ಸಿ ಚಾಲಕ ಮೃತಪಟ್ಟಿದ್ದಾನೆ ಎಂದು ದೆಹಲಿ ಪೊಲೀಸರು ಸೋಮವಾರ ಹೇಳಿದ್ದಾರೆ. 
ಈ ಘಟನೆ ಭಾನುವಾರ ಸುಮಾರು ೧೧:೩೦ಕ್ಕೆ ದಕ್ಷಿಣ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಸ್ಟೆಲ್ ಬಸ್ ನಿಲ್ದಾಣದ ಬಳಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ದೆಹಲಿಯ ಪಂಚಶೀಲದಿಂದ ೨೪ ವರ್ಷದ ಶೋಯೆಬ್ ಕೊಹ್ಲಿ ಅವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. 
"ಪಶ್ಚಿಮ ಬಂಗಾಳ ಮೂಲದ ೩೨ ವರ್ಷದ್ ನಸ್ರುಲ್ ವ್ಯಾಗನ್-ಆರ್ ಟ್ಯಾಕ್ಸಿ ಓಡಿಸುತ್ತಿದ್ದಾಗ, ಚಂಡೀಘರ್ ನೋಂದಾಯಿತ ಬಿಎಂಡಬ್ಲ್ಯೂ ಐ ಐ ಟಿ ಹಾಸ್ಟೆಲ್ ರಸ್ತೆಯ ತಿರುವಿನಲ್ಲಿ ಗುದ್ದಿದ್ದಕ್ಕೆ ಮೃತಪಟ್ಟಿದ್ದಾರೆ" ಎಂದು ಪೊಲೀಸ್ ಉಪ ಕಮಿಷನರ್ ಈಶ್ವರ್ ಸಿಂಗ್ ಹೇಳಿದ್ದಾರೆ. 
ನಸ್ರುಲ್ ಅವರನ್ನು ಎಐಐಎಂಎಸ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com