ರೈತರ ಸಮಸ್ಯೆಗಳಿಗೆ ಬಿಜೆಪಿ ಬುಲೆಟ್ ಗಳಿಂದ ಉತ್ತರಿಸುತ್ತಿದೆ: ಯೆಚೂರಿ
ಬಿಜೆಪಿ ಮುಂದಾಳತ್ವದ ಎನ್ ಡಿ ಎ ಕೇಂದ್ರ ಸರ್ಕಾರ ಕೃಷಿಯನ್ನು ನಷ್ಟದ ವೃತ್ತಿಯನ್ನಾಗಿ ಬದಲಾಯಿಸಿದ್ದು, ರೈತರ ಪ್ರಾಮಾಣಿಕ ತೊಂದರೆಗಳಿಗೆ ಬುಲೆಟ್ ಗಳಿಂದ ಉತ್ತರ ನೀಡುತ್ತಿದೆ ಎಂದು ಸಿಪಿಐ-ಎಂ
ನವದೆಹಲಿ: ಬಿಜೆಪಿ ಮುಂದಾಳತ್ವದ ಎನ್ ಡಿ ಎ ಕೇಂದ್ರ ಸರ್ಕಾರ ಕೃಷಿಯನ್ನು ನಷ್ಟದ ವೃತ್ತಿಯನ್ನಾಗಿ ಬದಲಾಯಿಸಿದ್ದು, ರೈತರ ಪ್ರಾಮಾಣಿಕ ತೊಂದರೆಗಳಿಗೆ ಬುಲೆಟ್ ಗಳಿಂದ ಉತ್ತರ ನೀಡುತ್ತಿದೆ ಎಂದು ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.
"ತಿಳಿಯಬೇಕಾದ ಅಂಶ ಏನೆಂದರೆ: ರೈತರ ಕೆಲಸ ಮತ್ತು ಉತ್ಪನ್ನಕ್ಕೆ ನಾವು ಅಗತ್ಯವಾದ ಪರಿಹಾರ ನೀಡುತ್ತಿಲ್ಲ. ಈಗ ಬಿಜೆಪಿ ರೈತರ ಪ್ರಾಮಾಣಿಕ ಸಮಸ್ಯೆಗಳಿಗೆ ಬುಲೆಟ್ ಗಳಿಂದ ಉತ್ತರ ನೀಡುತ್ತಿದೆ" ಎಂದು ಮಧ್ಯಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್ ಮಾಡಿ ಆರು ರೈತರ ಹತ್ಯೆಗೆ ಕಾರಣವಾದದ್ದನ್ನು ಉಲ್ಲೇಖಿಸಿ ಹೇಳಿದ್ದಾರೆ.
ಸಾಲ ಮನ್ನಾ ಮತ್ತು ಬೆಳೆ ಪರಿಹಾರ ಬೆಲೆಯನ್ನು ಹೆಚ್ಚಿಸಲು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
"ಕನಿಷ್ಠ ಬೆಂಬಲ ಬೆಲೆ ಅತಿ ಕಡಿಮೆ ಇದೆ. ರಾಜ್ಯ ಮಟ್ಟದ ಬೋನಸ್ ಅನ್ನು ಮೋದಿ ಸರ್ಕಾರ ನಿಲ್ಲಿಸಿದೆ. ಮಾರುಕಟ್ಟೆ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಇದೆ. ಇದು ಕೃಷಿಯನ್ನು ನಷ್ಟದಾಯಕ ಹುದ್ದೆಯನ್ನಾಗಿಸಿದೆ" ಎಂದು ಫೇಸ್ಬುಕ್ ನಲ್ಲಿ ಅವರು ಬರೆದಿದ್ದಾರೆ.
ಸಾಲಾ ಮನ್ನಾ ತಾತ್ಕಾಲಿಕವಾದದ್ದು, ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಮತ್ತು ರಾಜ್ಯಗಳಿಗೆ ಬೋನಸ್ ನೀಡಲು ಅವಕಾಶ ನೀಡಬೇಕು ಎಂದು ಕೂಡ ಅವರು ಹೇಳಿದ್ದಾರೆ.
"ಇಲ್ಲಿ ರೈತರು ಉತ್ಪಾದನೆಯನ್ನು ಹೆಚ್ಚಿಸುತ್ತಿರುವಾಗ, ಕಡಿಮೆ ಬೆಲೆಯಲ್ಲಿ ಆಮದು ಮಾಡಿಕೊಂಡು, ಮಾರಾಟಗಾರರಿಗೆ ಅನುಕೂಲವಾಗುವಂತೆ ಬೆಲೆಗಳನ್ನು ಕಡಿಮೆ ದರದಲ್ಲಿ ಕಾಪಾಡುವುದು ರೈತ ವಿರೋಧಿ ಕ್ರಮ" ಎಂದು ಕೂಡ ಅವರು ಬರೆದಿದ್ದಾರೆ.