ಯೂಟ್ಯೂಬ್ ಚಿತ್ರ
ಯೂಟ್ಯೂಬ್ ಚಿತ್ರ

ಎಚ್ಚರ...ಭಾರತಕ್ಕೂ ಕಾಲಿಟ್ಟಿದೆ ಪ್ಲಾಸ್ಟಿಕ್ ಎಲೆ ಕೋಸು: ದೆಹಲಿ ಮಹಿಳೆಯಿಂದ ಮನೆಯಲ್ಲೇ ಪ್ರಾತ್ಯಕ್ಷಿಕೆ

ಚೀನಾದಲ್ಲಿ ಪ್ಲಾಸ್ಟಿಕ್ ಅಕ್ಕಿ ಮತ್ತು ಪ್ಲಾಸ್ಟಿಕ್ ಸಕ್ಕರೆ ತಯಾರಿಸಿ ಭಾರತಕ್ಕೆ ರಫ್ತು ಮಾಡಲಾಗುತ್ತಿದೆ ಎಂಬ ವಾದದ ನಡುವೆಯೇ ಇತ್ತ ದೆಹಲಿಯಲ್ಲಿ ಪ್ಲಾಸ್ಟಿಕ್ ಎಲೆಕೋಸು ಪತ್ತೆಯಾಗುವ ಮೂಲಕ ಗ್ರಾಹಕರಲ್ಲಿ ಭೀತಿ ಸೃಷ್ಟಿಸಿದೆ.

ನವದೆಹಲಿ: ಚೀನಾದಲ್ಲಿ ಪ್ಲಾಸ್ಟಿಕ್ ಅಕ್ಕಿ ಮತ್ತು ಪ್ಲಾಸ್ಟಿಕ್ ಸಕ್ಕರೆ ತಯಾರಿಸಿ ಭಾರತಕ್ಕೆ ರಫ್ತು ಮಾಡಲಾಗುತ್ತಿದೆ ಎಂಬ ವಾದದ ನಡುವೆಯೇ ಇತ್ತ ದೆಹಲಿಯಲ್ಲಿ ಪ್ಲಾಸ್ಟಿಕ್ ಎಲೆಕೋಸು ಪತ್ತೆಯಾಗುವ ಮೂಲಕ ಗ್ರಾಹಕರಲ್ಲಿ ಭೀತಿ ಸೃಷ್ಟಿಸಿದೆ.

ಪ್ಲಾಸ್ಟಿಕ್‌ ಸಕ್ಕರೆ, ಅಕ್ಕಿ ಮಾರುಕಟ್ಟೆಗೆ ಬಂದಿದ್ದಾಯ್ತು. ಇದೀಗ ಪ್ಲಾಸ್ಟಿಕ್‌ ತರಕಾರಿಯ ಸರದಿ. ಹೌದು ದೆಹಲಿಯಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ತರಕಾರಿ ಮಾರುಕಟ್ಟೆಯಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿದೆ ಎಂದು ಮಹಿಳೆಯೊಬ್ಬರು  ಆರೋಪಿಸಿದ್ದಾರೆ.

ರುಚಿ ಟಂಡನ್ ಮಂಡ್ಲೆ ಎಂಬ ಮಹಿಳೆ ತಮಗೆ ಸಿಕ್ಕ ಎಲೆಕೋಸ್ ಅನ್ನು ಪರೀಕ್ಷೆಗೊಳಪಡಿಸಿದಾಗ ಅದು ಪ್ಲಾಸ್ಟಿಕ್ ಎಲೆಕೋಸು ಎಂಬುದು ಖಚಿತವಾಗಿದೆ. ಈ ಬಗ್ಗೆ ಮಹಿಳೆ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್  ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

ಯೂ ಟ್ಯೂಬ್‌ನಲ್ಲಿ ನಕಲಿ ವಸ್ತುಗಳ ಬಗ್ಗೆ ನೋಡುತ್ತಿದ್ದ ವೇಳೆ ಮಹಿಳೆ ರುಚಿ ಟಂಡನ್ ಅವರಿಗೆ ಪ್ಲಾಸ್ಟಿಕ್‌ ನಿಂದ ತಯಾರಿಸಿದ ದಿನನಿತ್ಯದ ವಸ್ತುಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮನೆಗೆ ತಂದಿದ್ದ ಎಲೆ ಕೋಸ್ ಅನ್ನು   ಪರೀಕ್ಷಿಸಲೆಂದು ಮಹಿಳೆ, ಅದನ್ನು ಸುಮ್ಮನೆ ಕತ್ತರಿಸಿದಾಗ, ಅದು ನೈಸರ್ಗಿಕವಾಗಿ ಸುಲಭವಾಗಿ ಕತ್ತರಿಸಲು ಸಾಧ್ಯವಾಗಿಲ್ಲ. ನಂತರ ಎಲೆಯನ್ನು ಗ್ಯಾಸ್‌ ಸ್ಟೌವ್‌ ನಲ್ಲಿ ಬೆಂಕಿಗೆ ಹಿಡಿದಾಗ, ಹಲವು ಸೆಕೆಂಡ್‌ ಗಳ ಬಳಿಕವೂ ಯಾವುದೇ  ವ್ಯತ್ಯಾಸ ಕಾಣದೇ ಹಾಗೆಯೇ ಉಳಿದುಕೊಂಡಿದೆ. ಇದು ಮಹಿಳೆಯನ್ನು ಗಾಬರಿಗೆ ಗುರಿ ಮಾಡಿದ್ದು, ಆ ಮೂಲಕ ಇದು ಪ್ಲಾಸ್ಟಿಕ್ ಎಲೆ ಕೋಸು ಎಂಬುದು ಸಾಬೀತಾಗಿದೆ.

ಮನೆಯ ಬಳಿಯೇ ಇದ್ದ ಖ್ಯಾತ ತರಕಾರಿ ಮಳಿಗೆಯೊಂದರಿಂದ ಈ ಕೋಸು ಖರೀದಿಸಿ ತಂದಿದ್ದೆ. ಪರೀಕ್ಷೆ ಬಳಿಕ ಅದು, ಪ್ಲಾಸ್ಟಿಕ್‌ ನಿಂದ ತಯಾರಿಸಿದ್ದು ಎಂದು ಕಂಡುಬಂದಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದೀಗ ಈ  ವಿಡಿಯೋ ವೈರಲ್ ಅಗಿದ್ದು, ಈ ಹಿಂದೆ ಪ್ಲಾಸ್ಟಿಕ್ ಕೋಸು ತಯಾರಿಸುವ ವಿಡಿಯೋ ಕೂಡ ವೈರಲ್ ಆಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com