ಈ ಕುರಿತು ಇಂದು ಮಾಧ್ಯಮಗಳಿಗೆ ವರದಿ ನೀಡಿದ ಎಂಇಎ ವಕ್ತಾರ ಗೋಪಾಲ್ ಬಗ್ಲೆ, ಭಾರತೀಯ ಹೈ ಕಮಿಷನ್ ಉಝಮ್ ಗೆ ಎಲ್ಲಾ ಅಗತ್ಯ ಕಾನ್ಸುಲರ್ ಮತ್ತು ಕಾನೂನು ನೆರವು ಒದಗಿಸಿದೆ. ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಪಾಕಿಸ್ತಾನ ವಿದೇಶಾಂಗ ಕಚೇರಿ ಜೊತೆ ಸಂಪರ್ಕದಲ್ಲಿದ್ದೇವೆ. ಭಾರತದಲ್ಲಿರುವ ಅವರ ಕುಟುಂಬ ಜೊತೆ ಕೂಡ ಮಾತನಾಡಿದ್ದೇವೆ. ಆಕೆ ಅಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.