ಮೋದಿ ಪ್ರವಾಸ ಹಿನ್ನಲೆ: ಚೀನಾ ಜಲಾಂತರ್ಗಾಮಿಗೆ ಶ್ರೀಲಂಕಾ ನಿರ್ಬಂಧ!

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ಚೀನಾ ದೇಶದ ಜಲಾಂತರ್ಗಾಮಿ ನೌಕೆಗಳನ್ನು ಲಂಕಾ ಸಮುದ್ರ ಗಡಿಯಲ್ಲಿ ನಿಲುಗಡೆ ಮಾಡಲು ಪ್ರಧಾನಿ ರನಿಲ್‌ ವಿಕ್ರಂ ಸಿಂಘೆ ನಿರಾಕರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಲಂಬೋ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ಚೀನಾ ದೇಶದ ಜಲಾಂತರ್ಗಾಮಿ ನೌಕೆಗಳನ್ನು ಲಂಕಾ ಸಮುದ್ರ ಗಡಿಯಲ್ಲಿ ನಿಲುಗಡೆ ಮಾಡಲು ಪ್ರಧಾನಿ  ರನಿಲ್‌ ವಿಕ್ರಂ ಸಿಂಘೆ ನಿರಾಕರಿಸಿದ್ದಾರೆ.

ಶ್ರೀಲಂಕಾದಲ್ಲಿ ಚೀನಾದ ಸರ್ಕಾರಿ ಸ್ವಾಮ್ಯದ ಮೆಗಾ ಕಂಟೇನರ್ ಟರ್ಮಿನಲ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದೇ ಕಾರಣಕ್ಕೆ ಚೀನಾ ತನ್ನ ಸಬ್ ಮೆರಿನ್ ಅನ್ನು ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಲಂಗರು ಹಾಕಲು ಅನುಮತಿ  ಕೋರಿತ್ತು. ಆದರೆ ಪ್ರಸ್ತುತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಲಂಕಾ ಪ್ರವಾಸ ಕೈಗೊಂಡಿದ್ದು, ಈ ಹೊತ್ತಿನಲ್ಲಿ ಅವರಿಗೆ ಯಾವುದೇ ಮುಜುಗರವಾಗುವುದನ್ನು ಚಡೆಯುವ ನಿಟ್ಟಿನಲ್ಲಿ ಶ್ರೀಲಂಕಾ ಸರ್ಕಾರ  ಚೀನಾಗೆ ಜಲಾಂತರ್ಗಮಿ ನೌಕೆ ಲಂಗರು ಹಾಕಲು ಅನುಮತಿ ನಿರಾಕರಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ಸರ್ಕಾರದ ಅಧಿಕಾರಿಯೊಬ್ಬರು, ಹೌದು ಚೀನಾ ಸರ್ಕಾರ ತನ್ನ ಜಲಾಂತರ್ಗಾಮಿ ನೌಕೆ ಲಂಗರು ಹಾಕಲು ಅನುಮತಿ ಕೇಳಿತ್ತು. ಆದರೆ ನಾವು ಆ ಮನವಿಯನ್ನು ತಳ್ಳಿ ಹಾಕಿದ್ದೇವೆ.  ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಲಂಕಾ ರಾಜಧಾನಿ ಕೊಲಂಬೋದಲ್ಲಿ ಮೇ.12-14ರವರೆಗೂ ನಡೆಯಲಿರುವ ಅಂತರಾಷ್ಟ್ರೀ ವೈಶಾಕ ದಿನ ಆಚರಣೆಯಲ್ಲಿ 100 ರಾಷ್ಟ್ರಗಳ 400ಕ್ಕೂ ಹೆಚ್ಚು ಪ್ರತಿನಿಧಿಗಳನ್ನೊಳಗೊಂಡ ಅಂತರಾಷ್ಟ್ರೀಯ ಬೌದ್ಧರ ಸಮ್ಮೇಳನ ಸಹ  ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಬೌದ್ಧ ಧರ್ಮದ ಆಧ್ಯಾತ್ಮಿಕ ನಾಯಕರು, ವಿದ್ವಾಂಸರು ಮತ್ತು ದೈವಾಂಶ  ಸಂಭೂತರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಭೇಟಿಯಿಂದ ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಮೋದಿ ಅವರು ಶ್ರೀಲಂಕಾಕ್ಕೆ ಭೇಟಿ ನೀಡುತ್ತಿರುವುದು ಎರಡನೇ ಬಾರಿಯಾಗಿದೆ. ಇಂದು ಪ್ರಮುಖ ಒಪ್ಪಂದಗಳಿಗೆ ಮೋದಿ ಹಾಗೂ ಲಂಕಾ ಪ್ರಧಾನಿ ರನಿಲ್‌ ವಿಕ್ರಂ ಸಿಂಘೆ ಅವರು ಸಹಿ ಹಾಕಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com