ಪ್ರಧಾನ ಸುದ್ದಿ

ಸೇನಾ ಶಾಲೆಗೆ ಉಮರ್‌ ಫಯಾಜ್‌ ಹೆಸರು, ಕುಟುಂಬಕ್ಕೆ 75 ಲಕ್ಷ ರು. ಚೆಕ್

ಸೇನಾ ಶಾಲೆಗೆ ಉಮರ್‌ ಫಯಾಜ್‌ ಹೆಸರು, ಕುಟುಂಬಕ್ಕೆ 75 ಲಕ್ಷ ರು. ಚೆಕ್
ಉಮರ್ ಫಯಾಜ್
Published On :
ಶ್ರೀನಗರ: ಸೇನಾ ಶಾಲೆಗೆ ಮರುನಾಮಕರಣ ಮಾಡಲಾಗಿದ್ದು, ಇತ್ತೀಚಿಗಷ್ಟೇ ದಕ್ಷಿಣ ಕಾಶ್ಮೀರದಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಯಾದ ಕಾಶ್ಮೀರದ 22 ವರ್ಷದ ಯುವ ಸೇನಾಧಿಕಾರಿ ಲೆಫ್ಟಿನಂಟ್‌ ಉಮರ್‌ ಫಯಾಜ್‌ ಅವರ ಹೆಸರಿಡಲಾಗಿದೆ ಎಂದು ಶನಿವಾರ ಭಾರತೀಯ ಸೇನೆ ತಿಳಿಸಿದೆ.
ಹುತಾತ್ಮ ಯೋಧ ಉಮರ್ ಫಯಾಜ್ ಅವರ ಕುಟುಂಬಕ್ಕೆ ಸೇನೆಯ ವಿಮಾ ನಿಧಿಯಿಂದ 75 ಲಕ್ಷ ರುಪಾಯಿ ಚೆಕ್‌ ಹಾಗೂ ರಜಪೂತಾನ ರೈಫಲ್ಸ್‌ನಿಂದ  1 ಲಕ್ಷ ರುಪಾಯಿ ಚೆಕ್‌ ಅನ್ನು ನೀಡಲಾಗಿದೆ ಎಂದು ಸೇನೆ ತಿಳಿಸಿದೆ.
ಸೇನಾ ಶಾಲೆಯೊಂದಕ್ಕೆ ‘ಲೆ. ಉಮರ್ ಫಯಾಜ್‌ ಸೌಹಾರ್ದ ಶಾಲೆ’ ಎಂದು ಮರುನಾಮಕರಣದ ಮಾಡಿರುವ ಕುರಿತು ಸೇನೆ ಪ್ರಕಟಿಸಿದೆ.
ಉಮರ್ ಫಯಾಜ್ ಅವರು ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಅವರನ್ನು ಅಪಹರಿಸಿದ್ದ ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದರು. ಬಳಿಕ  ಅವರ ಶವ ಶೋಪಿಯಾನ್ ನಲ್ಲಿ ಪತ್ತೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.