ದೇಶಇಐಎ 2020 'ವಿನಾಶಕಾರಿ', ರದ್ದುಗೊಳಿಸಲು ಸೋನಿಯಾ, ರಾಹುಲ್ ಒತ್ತಾಯ
ಕರಡು ಪರಿಸರ ಪರಿಣಾಮದ ಮೌಲ್ಯಮಾಪನ(ಇಐಎ) 2020 'ಪರಿಸರದ ಮೇಲೆ ಪರಿಣಾಮ ಬೀರುವ 'ವಿನಾಶಕಾರಿ' ಕಾನೂನು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದು, ನಿಯಮಗಳು ಮತ್ತು ಅದರ ಅಧಿಸೂಚನೆಯನ್ನು ಹಿಂಪಡೆಯಲು ಒತ್ತಾಯಿಸಿದ್ದಾರೆ.