ಸಿನಿಮಾ ಸುದ್ದಿಪ್ರಶಾಂತ್ ನೀಲ್- ಜೂನಿಯರ್ ಎನ್ಟಿಆರ್ ಕಾಂಬಿನೇಶನ್ ಮುಂದಿನ ಚಿತ್ರ 'ಎನ್ಟಿಆರ್ 31'; ಆಗಸ್ಟ್ನಿಂದ ಚಿತ್ರೀಕರಣ ಪ್ರಾರಂಭ
ಸೋಮವಾರ ನಟ ಜೂನಿಯರ್ ಎನ್ಟಿಆರ್ ಅವರ 41 ನೇ ಹುಟ್ಟುಹಬ್ಬದಂದು, ಅವರು ಮತ್ತು 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಮುಂದಿನ ಚಿತ್ರಕ್ಕಾಗಿ ಜೊತೆಯಾಗುತ್ತಿರುವುದನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಚಿತ್ರಕ್ಕೆ ಸದ್ಯ ತಾತ್ಕಾಲಿಕವಾಗಿ 'ಎನ್ಟಿಆರ್ 31' ಎಂದು ಹೆಸರಿಡಲಾಗಿದೆ. ಚಿತ್ರೀಕರಣವು ಆಗಸ್ಟ್ 2024 ರಿಂದ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.