ಸಿನಿಮಾ ಸುದ್ದಿಕೊರೋನಾ ವೈರಸ್: ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕ ವರ್ಗಕ್ಕೆ ರೂ.50 ಲಕ್ಷ ದೇಣಿಗೆ ನೀಡಿದ ರಜನಿಕಾಂತ್
ದೇಶದಾದ್ಯಂತ ಕೊರೋನಾ ವೈರಸ್ ರುದ್ರ ತಾಂಡವವಾಡುತ್ತಿದ್ದು, ವೈರಸ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ತಮಿಳುನಾಡು ಸರ್ಕಾರ ಇಡೀ ರಾಜ್ಯವನ್ನು ಬಂದ್ ಮಾಡಿದೆ. ಬಂದ್ ನಿಂದಾಗಿ ಸಿನಿಮಾಮ ಕಾರ್ಮಿಕ ವರ್ಗ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು, 50 ಲಕ್ಷ ದೇಣಿಗೆ ನೀಡಿದ್ದಾರೆ.